ಕ್ವಿಟೊ: ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಘರ್ಷಣೆಯಿಂದಾಗಿ 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಈಕ್ವೆಡಾರ್‌ನ ರಾಜಧಾನಿ ಕ್ವಿಟೊ ಜೈಲಿನಲ್ಲಿ ಕೈದಿಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಮೂವರು ಕುಖ್ಯಾತ ಅಪರಾಧಿಗಳನ್ನು ಹೆಚ್ಚಿನ ಭದ್ರತಾ ಸೆಲ್‌ಗೆ ಸ್ಥಳಾಂತರಿಸಲು ಸರ್ಕಾರವು ನಿರ್ಧರಿಸಿದ ಪರಿಣಾಮವಾಗಿ ಈ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಈ ಮಧ್ಯೆ, ಪೊಲೀಸರು ಮತ್ತು ಸೇನೆ ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಈಕ್ವೆಡಾರ್‌ನ ಕಾರಾಗೃಹಗಳಲ್ಲಿ, ವಿಶೇಷವಾಗಿ ಗುವಾಕ್ವಿಲ್ ಲಿಟೋರಲ್ ಪೆನಿಟೆನ್ಷಿಯರಿಯಲ್ಲಿ ಆಗಾಗ್ಗೆ ಗಲಭೆಗಳು ಸಂಭವಿಸುತ್ತಲೇ ಇವೆ. ಬಂದರು ನಗರವಾದ ಗುವಾಕ್ವಿಲ್‌ನಲ್ಲಿರುವ ಜೈಲಿನಲ್ಲಿ ತಿಂಗಳ ಹಿಂದೆ ನಡೆದ ಘರ್ಷಣೆಯಲ್ಲಿ 13 ಕೈದಿಗಳು ಹತ್ಯೆಯಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 126 ಕೈದಿಗಳನ್ನು ಕೊಲ್ಲಲಾಗಿತ್ತು.
ಕಳೆದ ವರ್ಷ ಇತರ ಕೈದಿಗಳಿಂದ ಒಟ್ಟು 316 ಕೈದಿಗಳು ಕೊಲ್ಲಲ್ಪಟ್ಟಿದ್ದು,. ಈ ವರ್ಷ 130 ಮಂದಿ ಹತ್ಯೆಯಾಗಿದೆ.