ದೇವಸ್ಥಾನದ ಹುಂಡಿ, ಬೈಕ್ ಕಳ್ಳತನಗೈಯ್ಯುತ್ತಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಚಾಲಕನ ಬಂಧನ

Prasthutha|

ಮನೆಯ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಕಳ್ಳನೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕನಾಗಿರುವ ಮೊಂಟೆಪದವು ನಿವಾಸಿ ತಾರನಾಥ್ ಮೋಹನ ಎಂದು ತಿಳಿದುಬಂದಿದೆ. ಮಂಜನಾಡಿ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಹಲವು ಬೈಕ್ ಗಳನ್ನು ಕಳವು ನಡೆಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

- Advertisement -

ಮೊಂಟೆಪದವು ಬಳಿಯ ಬದ್ರುಲ್ ಮುನೀರ್ ಎಂಬವರ ಬೈಕ್ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯರಾತ್ರಿ ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧಾರದಲ್ಲಿ ಸಾರ್ವಜನಿಕರೇ ಆರೋಪಿಯನ್ನುಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದರು.

- Advertisement -