Home ಟಾಪ್ ಸುದ್ದಿಗಳು ತೆಲಂಗಾಣ: 5 ಲಕ್ಷ 60 ಸಾವಿರ ಕೋಟಿ ಸಾಲ ಮಾಡಿದ್ದ ಹಿಂದಿನ ಸರಕಾರ!

ತೆಲಂಗಾಣ: 5 ಲಕ್ಷ 60 ಸಾವಿರ ಕೋಟಿ ಸಾಲ ಮಾಡಿದ್ದ ಹಿಂದಿನ ಸರಕಾರ!

ತೆಲಂಗಾಣ: ಸರ್ಕಾರ 5 ಲಕ್ಷ 59 ​​ಸಾವಿರ ಕೋಟಿ ಸಾಲ ಹೊಂದಿದೆ ಎಂದು ಹಣಕಾಸು ಸಚಿವರೂ ಆದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ. 2014ರ ಜೂನ್ 2ರಿಂದ ರಾಜ್ಯದ ಆದಾಯ, ವೆಚ್ಚ ಮತ್ತು ಸವಲತ್ತುಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗುತ್ತಿದೆ. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿಗತಿ, ಆದಾಯ, ಖರ್ಚು ಮತ್ತಿತರ ವಿವರಗಳನ್ನು ಅಧಿಕಾರಿಗಳ ಬಳಿ ಅವರು ವಿಚಾರಿಸಿದರು.

ರಾಜ್ಯದ ಮೇಲೆ 5.5 ಲಕ್ಷ ಕೋಟಿ ರೂ. ಸಾಲ ಇದೆ, ಆದರೂ ಆರ್ಥಿಕ ಇಲಾಖೆ ಜವಾಬ್ದಾರಿಯಿಂದ ರಾಜ್ಯವನ್ನು ಮುನ್ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ವಿಕ್ರಮಾರ್ಕ ಹೇಳಿದರು. ಕಾಂಗ್ರೆಸ್ ಪಕ್ಷ ಘೋಷಿಸಿರುವ ಮತ್ತು ‘ಅಭಯ ಹಸ್ತಂ’ ಪ್ರಣಾಳಿಕೆಯಲ್ಲಿ ಸೇರಿಸಿರುವ ಆರು ಭರವಸೆಗಳನ್ನು ಈಡೇರಿಸಲು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುವಂತೆ ಅವರು ತಿಳಿಸಿದರು.

Join Whatsapp
Exit mobile version