Home ಟಾಪ್ ಸುದ್ದಿಗಳು ತೆಲಂಗಾಣ | ಜಲಾವೃತಗೊಂಡ ರಸ್ತೆಯಲ್ಲೇ ಮುಳುಗಿದ ಶಾಲಾ ಬಸ್; ಸ್ಥಳೀಯರಿಂದ ಮಕ್ಕಳ ರಕ್ಷಣೆ

ತೆಲಂಗಾಣ | ಜಲಾವೃತಗೊಂಡ ರಸ್ತೆಯಲ್ಲೇ ಮುಳುಗಿದ ಶಾಲಾ ಬಸ್; ಸ್ಥಳೀಯರಿಂದ ಮಕ್ಕಳ ರಕ್ಷಣೆ

ತೆಲಂಗಾಣ: ಜಲಾವೃತಗೊಂಡ ರಸ್ತೆಯಲ್ಲಿ ಶಾಲಾ ವಾಹನವೊಂದು ಭಾಗಶಃ ಮುಳುಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತೊಯ್ದ ಶಾಲಾ ಬಸ್ ತೆಲಂಗಾಣದ ಮೆಹಬೂಬ್ ನಗರದಲ್ಲಿ ಜಲಾವೃತ ರಸ್ತೆಯಲ್ಲಿ ಭಾಗಶಃ ಮುಳುಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಬಸ್ ನಲ್ಲಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರ ಕಾರ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp
Exit mobile version