ಮಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ತೆಲಂಗಾಣ ಶಾಸಕನ ಕಾರು ಅಪಘಾತ

Prasthutha|

ಕಾರ್ಕಳ: ಮಂಗಳೂರಿನಿಂದ ಶೃಂಗೇರಿಗೆ ಪ್ರಯಾಣಿಸುತ್ತಿದ್ದ ತೆಲಂಗಾಣದ ಶಾಸಕ ರೋಹಿತ್ ರೆಡ್ಡಿ ಅವರ ಕಾರು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.

- Advertisement -


ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್ ರೆಡ್ಡಿ ಚಲಿಸುತ್ತಿದ್ದ ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ವಾಹನದಲ್ಲಿ ಇದ್ದ ಶಾಸಕರಿಗೆ ಯಾವುದೇ ತರದಲ್ಲಿ ಗಾಯಗಳು ಸಂಭವಿಸಲಿಲ್ಲ.


ಶಾಸಕ ರೋಹಿತ್ ರೆಡ್ಡಿ ಹೈದರಾಬಾದ್ ನಿಂದ ಮಂಗಳೂರು ಏರ್ಪೋರ್ಟ್ ಗೆ ಇಂದು ಬೆಳಗ್ಗೆ ಆಗಮಿಸಿದ್ದರು. ಬಳಿಕ ಅವರು ಕಾರ್ಕಳ ಮಾರ್ಗವಾಗಿ ಶೃಂಗೇರಿ ಭೇಟಿಗೆ ಹೊರಟಿದ್ದರು. ಈ ವೇಳೆ ಇಲ್ಲಿನ ಮುಡಾರು-ನಲ್ಲೂರು ಕ್ರಾಸ್ ಬಳಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ.

- Advertisement -


ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಪ್ರತ್ಯೇಕ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ.