Home ಟಾಪ್ ಸುದ್ದಿಗಳು ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಲಾಕ್‌ಡೌನ್ ಘೋಷಣೆ!

ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಲಾಕ್‌ಡೌನ್ ಘೋಷಣೆ!

ಹೈದರಾಬಾದ್ : ಕೋವಿಡ್ ಸೋಂಕಿನ ತೀವ್ರಗತಿಯ ಹೆಚ್ಚಳದಿಂದಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಮಂಗಳವಾರ 10 ದಿನಗಳ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದೆ.

ನಾಳೆ (ಮೇ 12)ಯಿಂದ ಮೇ 22ರವರೆಗೆ ಲಾಕ್ ಡೌನ್ ಜಾರಿಯಾಗಲಿದ್ದು, ತೆಲಂಗಾಣದಾದ್ಯಂತ ಪ್ರತಿದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಎಲ್ಲಾ ಚಟುವಟಿಕೆಗಳನ್ನ ಅನುಮತಿ ಇದೆ. ಇದರ ನಂತರ ಲಾಕ್ ಡೌನ್ʼನ ಉಳಿದ ಭಾಗಕ್ಕೆ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

Join Whatsapp
Exit mobile version