ತೆಲಂಗಾಣ: ‘ಶಿವರಾತ್ರಿ ನಾಮಫಲಕ’ ತೆಗೆಯುವಂತೆ ಬಲವಂತಪಡಿಸಿ ಮುಸ್ಲಿಮ್ ಹಣ್ಣು ವ್ಯಾಪಾರಿಗೆ ಬೈಕ್ ಸವಾರನಿಂದ ಬೆದರಿಕೆ

Prasthutha|

ಹೈದರಾಬಾದ್: ಹಿಂದೂ ಭಾಂದವರಿಗೆ ಶಿವರಾತ್ರಿಯ ಶುಭಕೋರಿ ಹಾಕಲಾಗಿದ್ದ ನಾಮಫಲಕ ತೆಗೆಯುವಂತೆ ಮುಸ್ಲಿಮ್ ವ್ಯಾಪಾರಿಗೆ ಅನ್ಯಧರ್ಮದ ಬೈಕ್ ಸವಾರನೊಬ್ಬ ಬೆದರಿಕೆ ಹಾಕಿದ ಘಟನೆ ತೆಲಂಗಾಣದ ಕರೀಮ್ ನಗರದಲ್ಲಿ ನಡೆದಿದೆ.

- Advertisement -

ಇಲ್ಲಿನ ಕೋರ್ಟ್ ಏರಿಯಾದ ವ್ಯಾಪಾರಿ ಸೈಯ್ಯದ್ ಅಸ್ಲಮ್ ಎಂಬವರು ಶಿವರಾತ್ರಿಯ ಶುಭಕೋರಿ ಫ್ಲೆಕ್ಸ್ ಅಳವಡಿಸಿದ್ದರು. ಈ ಫ್ಲೆಕ್ಸ್ ಅನ್ನು ತೆಗೆಯದಿದ್ದರೆ ನೂರಾರು ಜನರೊಂದಿಗೆ ಬಂದು ನಾಮಫಲಕವನ್ನು ತೆಗೆಸಲು ಗೊತ್ತಿದೆ ಎಂದು ಬೈಕ್ ಸವಾರ ಬೆದರಿಸಿದ್ದಾನೆ. ದರಿಂದ ಕರೀಮ್ ನಗರದ ಕೆಲಹೊತ್ತು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಸ್ಲಿಮ್ ಹಣ್ಣಿನ ವ್ಯಾಪಾರಿಯೊಂದಿಗೆ ಅತಿರೇಕದ ವರ್ತನೆ ತೋರಿಸುತ್ತಿರುವ ಬೈಕ್ ಸವಾರನನ್ನು ಸಾರ್ವಜನಿಕರು ಸಮಾಧಾನಪಡಿಸುತ್ತಿರುವ ದೃಶ್ಯ ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮಸ್ಯೆಯನ್ನು ಮಾತುಕತೆಯ ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.



Join Whatsapp
Exit mobile version