Home ಟಾಪ್ ಸುದ್ದಿಗಳು ಜಾತಿ ಆಧಾರಿತ ಉದ್ಯೋಗಕ್ಕೆ ಕತ್ತರಿ: ಬಿಜೆಪಿ ನಾಯಕರ ತಲೆಗೂದಲು ಕಟ್ ಮಾಡದಿರಲು ಕ್ಷೌರಿಕರು ನಿರ್ಧಾರ

ಜಾತಿ ಆಧಾರಿತ ಉದ್ಯೋಗಕ್ಕೆ ಕತ್ತರಿ: ಬಿಜೆಪಿ ನಾಯಕರ ತಲೆಗೂದಲು ಕಟ್ ಮಾಡದಿರಲು ಕ್ಷೌರಿಕರು ನಿರ್ಧಾರ

ಹೈದರಾಬಾದ್: ಜಾತಿ ಆಧಾರಿತ ಉದ್ಯೋಗಗಳಿಗೆ ಕೇಂದ್ರ ಸರ್ಕಾರ ಧಕ್ಕೆ ತರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಫೆ.20ರಿಂದ ಬಿಜೆಪಿ ನಾಯಕರ ತಲೆಗೂದಲು ಕಟ್ ಮಾಡದಿರಲು ನಿರ್ಧರಿಸಲಾಗಿದೆ ಎಂದು ತೆಲಂಗಾಣದ ಕ್ಷೌರಿಕ ಸಂಘ ತಿಳಿಸಿದೆ.

ಸುಧಾರಣೆ ತರುವ ನೆಪದಲ್ಲಿ ಮೋದಿ ಸರ್ಕಾರ ನಮ್ಮ ಆಹಾರದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ರಾಜ್ಯ ಅಗಸ ಮತ್ತು ಕ್ಷೌರಿಕ ಸಂಘಗಳ ಮುಖಂಡರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಜನವಿರೋಧಿ ನಿಲುವಿನಿಂದಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ 250 ಯೂನಿಟ್ ಉಚಿತ ವಿದ್ಯುತ್ ಯೋಜನೆ ರದ್ದಾಗುವ ಭೀತಿ ಎದುರಾಗಿದೆ ಎಂದು ಕ್ಷೌರಿಕ ಸಂಘ ಆರೋಪಿಸಿದ್ದು, ಇದನ್ನು ವಿರೋಧಿಸಿ ಫೆಬ್ರವರಿ 20ರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ 20ರಿಂದ ಬಿಜೆಪಿ ನಾಯಕರ ತಲೆಗೂದಲು ಕಟ್ ಮಾಡುವುದಿಲ್ಲ ಎಂದು ಕ್ಷೌರಿಕ ಸಂಘದ ಮುಖಂಡರು ತಿಳಿಸಿದ್ದಾರೆ.

ಇತ್ತೀಚೆಗೆ ಎಮ್.ಎಲ್.ಸಿ ಬಸವರಾಜು ಸಾರಯ್ಯ ನೇತೃತ್ವದಲ್ಲಿ ಅಗಸ ಕಾರ್ಮಿಕರ ಸಂಘದ ಮುಖಂಡರ ಸಭೆ ನಡೆದಿದ್ದು, ಕ್ಷೌರಿಕ ಸಂಘದ ರಾಜ್ಯಾಧ್ಯಕ್ಷ ರಸಮಲ್ಲ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೌರಿಕ ಸಂಘದ ಮುಖಂಡರು ಕೂಡ ಭಾಗವಹಿಸಿದ್ದರು.

ನೂತನ ವಿದ್ಯುತ್ ಕಾಯ್ದೆಯಲ್ಲಿ ಸಬ್ಸಿಡಿ ಮತ್ತು ಉಚಿತ ವಿದ್ಯುತ್ ಯೋಜನೆಯನ್ನು ರದ್ದುಪಡಿಸಲಿದ್ದು, ಈ ಕಾಯ್ದೆ ಜಾರಿಯಾದರೆ ಅಗಸ ಮತ್ತು ಕ್ಷೌರಿಕ ಸಮುದಾಯಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ರಾಜ್ಯ ವಾಷರ್ ಮೆನ್ ಮತ್ತು ಬಾರ್ಬರ್ ಅಸೋಸಿಯೇಷನ್ಸ್ ಆತಂಕ ವ್ಯಕ್ತಪಡಿಸಿದೆ.

Join Whatsapp
Exit mobile version