Home ಟಾಪ್ ಸುದ್ದಿಗಳು ಮರ ಕಡಿದ ಆರೋಪದಲ್ಲಿ ಆದಿವಾಸಿ ಮಹಿಳೆಗೆ ಅರಣ್ಯಾಧಿಕಾರಿಯಿಂದ ಹಲ್ಲೆ

ಮರ ಕಡಿದ ಆರೋಪದಲ್ಲಿ ಆದಿವಾಸಿ ಮಹಿಳೆಗೆ ಅರಣ್ಯಾಧಿಕಾರಿಯಿಂದ ಹಲ್ಲೆ

ತೆಲಂಗಾಣ: ತೆಲಂಗಾಣ ಚೆನ್ನೂರು ಮತ್ತು ಅಕ್ಕೆಪಲ್ಲಿಯಲ್ಲಿ ಆದಿವಾಸಿ ಮಹಿಳೆಯರು ಕಾಡಿನ ಮರಗಳನ್ನು ಕಡಿದ ಆರೋಪದಲ್ಲಿ ಅರಣ್ಯಾಧಿಕಾರಿ ಹಲ್ಲೆ ನಡೆಸಿ, ಚೆನ್ನೂರು ಅರಣ್ಯ ಕಚೇರಿಯಲ್ಲಿ ಬಲವಂತವಾಗಿ ಕೂಡಿಟ್ಟು ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ದೂರಿದ್ದಾರೆ.

ಮರ ಕಡಿದ ಆರೋಪದಲ್ಲಿ ಆದಿವಾಸಿ ಮಹಿಳೆಯರನ್ನು ಎರಡು ಗಂಟೆಗಳಿಗೂ ಅಧಿಕ ಕಾಲ ಕಚೇರಿಯಲ್ಲಿ ಬಲವಂತ ಕೂಡಿ ಹಾಕಲಾಗಿದ್ದು, ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಅರಣ್ಯಾಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಾವು 25 ವರ್ಷಕ್ಕೂ ಹೆಚ್ಚು ಕಾಲ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಸರ್ಕಾರಿ ಜಾಗದಲ್ಲಿ ಮರ ಕಡಿಯುತ್ತೇವೆ. ಇದನ್ನೇ ನೆಪವಾಗಿಟ್ಟು ಅರಣ್ಯಾಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.

Join Whatsapp
Exit mobile version