ಟಿಪ್ಪು ಜಯಂತಿಯನ್ನು ನಾವು ಆಚರಣೆ ಮಾಡಬೇಕು: ಸಂಸದ ತೇಜಸ್ವಿ ಸೂರ್ಯ

Prasthutha|

ಉಡುಪಿ: ಟಿಪ್ಪು ಸುಲ್ತಾನ್ ಕಾಲದಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಡವರನ್ನು ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಮತ್ತೆ ಹಿಂದೂ ಧರ್ಮಕ್ಕೆ ಕರೆದುಕೊಂಡು ಬರಬೇಕು. ಭಾರತ, ಪಾಕಿಸ್ತಾನದಲ್ಲಿ ಮತಾಂತರವಾದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ

- Advertisement -

ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ ಸೂರ್ಯ, ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಲು ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯಬೇಕು. ಹಿಂದೂಗಳು ಬಹುಸಂಖ್ಯಾತರಾಗಿ ಉಳಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೆ ಎಂದು ಹೇಳಿದರು.  ಕಳೆದ 70 ವರ್ಷಗಳಲ್ಲಿ ದೇಶ ಎದುರಿಸಿದ ಎಲ್ಲಾ ಸಮಸ್ಯೆಗಳಿಗೆ ಸಮಾಜವಾದ ಹಾಗೂ ಜಾತ್ಯಾತೀತವಾದವೇ ಕಾರಣ. ಸಮಾಜವಾದ ದೇಶವನ್ನು ಬಡತನಕ್ಕೆ ದೂಡಿದರೆ, ಜಾತ್ಯಾತೀತವಾದ ಸಾಂಸ್ಕೃತಿಕವಾಗಿ ಬಡತನಕ್ಕೆ ದೂಡಿತು ಎಂದು ತೇಜಸ್ವಿಸೂರ್ಯ ಹೇಳಿದರು.

ಹಿಂದೂ ಧರ್ಮ ಉಳಿಯಬೇಕಾದರೆ ನಾಶಮಾಡುವ ಶಕ್ತಿಗಳ ಬಗ್ಗೆ ಅರಿವಿರಬೇಕು. ವೈರಿಗಳ ಅರಿವಿಲ್ಲದಿದ್ದರೆ ಸ್ವರಕ್ಷಣೆ ಸಾಧ್ಯವಿಲ್ಲ, ಹಿಂದೂ ಧರ್ಮದ ಪುನರುತ್ಥಾನವೂ ಸಾಧ್ಯವಿಲ್ಲ ಎಂದರು.

- Advertisement -

‘ಎಲ್ಲ ದೇವರು – ಧರ್ಮಗಳು ಒಂದೇ ಎಂಬ ಕಲ್ಪನೆ ಬಲವಾಗಿ ಬೇರೂರಿದ್ದು, ನಮ್ಮನ್ನಾಳುವ ನಾಯಕರು ಕೂಡ ‘ಸರ್ವಧರ್ಮ ಸಮಭಾವ’ ಎಂದು ಹೇಳುತ್ತಲೇ ಹಿಂದೂ ಧರ್ಮದ ವೈರಿಗಳು ಯಾರು ಎಂಬುದನ್ನು ತಿಳಿಯದಂತಹ ಪರಿಸ್ಥಿತಿಗೆ ಬಂದಿದ್ದೇವೆ. ಎಲ್ಲಾ ಮತಗಳು ಒಂದೇ ಸಿದ್ಧಾಂತಗಳನ್ನು ಬೋಧಿಸುವುದಿಲ್ಲ. ಹಿಂದೂ ಧರ್ಮದಲ್ಲಿ ಕೋಟಿ ದೇವತೆಗಳನ್ನು ಆರಾಧಿಸುವ ಧಾರ್ಮಿಕ ಸ್ವಾತಂತ್ರ್ಯವಿದೆ. ಇಷ್ಟಪಟ್ಟ ದೇವರನ್ನು ಸೃಷ್ಟಿಸಿಕೊಳ್ಳುವ ಪರಂಪರೆಯನ್ನು ಹಿಂದೂ ಧರ್ಮ ಕೊಟ್ಟಿದೆ. ಆದರೆ, ಇಸ್ಲಾಂ ಹಾಗೂ ಕ್ರಿಶ್ಚಿಯನ್‌ ಧರ್ಮಗಳಲ್ಲಿ ಇಂತಹ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿಲ್ಲ’ ಎಂದರು

Join Whatsapp