Home ಟಾಪ್ ಸುದ್ದಿಗಳು ಏರ್ ಅರೇಬಿಯಾದಲ್ಲಿ ತಾಂತ್ರಿಕ ದೋಷ; ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ತುರ್ತು ಪರಿಸ್ಥಿತಿ ಘೋಷಣೆ

ಏರ್ ಅರೇಬಿಯಾದಲ್ಲಿ ತಾಂತ್ರಿಕ ದೋಷ; ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ತುರ್ತು ಪರಿಸ್ಥಿತಿ ಘೋಷಣೆ

ಕೊಚ್ಚಿ: ಶಾರ್ಜಾದಿಂದ 222 ಪ್ರಯಾಣಿಕರನ್ನು ಹೊತ್ತುಕೊಂಡು ಬಂದ ‘ಏರ್ ಅರೇಬಿಯಾ’ ವಿಮಾನದಲ್ಲಿ ತಹೈಡ್ರಾಲಿಕ್ ವೈಫಲ್ಯ ಕಾಣಿಸಿಕೊಂಡ ಪರಿಣಾಮ ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕೆಲ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.


ವಿಮಾನವು ಲ್ಯಾಂಡ್ ಆಗಿದ್ದು ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಸಿಐಎಎಲ್) ತಿಳಿಸಿದೆ.


ಏರ್ ಅರೇಬಿಯಾ ‘ಜಿ9–426’ ವಿಮಾನವು ಸಂಜೆ 7.13ಕ್ಕೆ ಲ್ಯಾಂಡ್ ಆಗಬೇಕಿತ್ತು. ವಿಮಾನವು ತಾಂತ್ರಿಕ ದೋಷ (ಹೈಡ್ರಾಲಿಕ್ ಫೈಲ್ಯೂರ್) ಎದುರಿಸುತ್ತಿದೆ ಎಂದು ತಿಳಿದ ಕೂಡಲೇ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು 9ನೇ ರನ್ವೇಯಲ್ಲಿ 7.29ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸಿಐಎಎಲ್ ಮಾಹಿತಿ ನೀಡಿದೆ.


ಆದರೆ ಇದುವರೆಗೆ ಏರ್ ಅರೇಬಿಯಾ ವಿಮಾನಯಾನ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ.

Join Whatsapp
Exit mobile version