Home ಟಾಪ್ ಸುದ್ದಿಗಳು ತಾಂತ್ರಿಕ ದೋಷ; ಕಾವೇರಿ ನದಿಯ ಮಧ್ಯೆ ನಿಂತ ಬೋಟ್

ತಾಂತ್ರಿಕ ದೋಷ; ಕಾವೇರಿ ನದಿಯ ಮಧ್ಯೆ ನಿಂತ ಬೋಟ್

ಕೊಡಗು: ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ಬೋಟ್ ಒಂದು ನಿಂತ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆಯಲ್ಲಿ ನಡೆದಿದೆ. ಇನ್ನೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಮದ ನಂದಿಯೂ ಉಕ್ಕಿ ಹರಿಯುತ್ತಿದ್ದು, ಭೋಟ್ ನಲ್ಲಿ ಇದ್ದವರು ಆತಂಕಕಿಡಾಗಿದ್ದರು. ಸುಮಾರು 10ಕ್ಕೂ ಹೆಚ್ಚು ಜನರಿದ್ದ ಬೋಟ್ ಸಿಲುಕಿಕೊಂಡಿದ್ದು, ನದಿಯಲ್ಲಿ ಮಧ್ಯೆ ಇದ್ದ ಮರದ ಕೊಂಬೆ ಹಿಡಿದು ಬೋಟ್ ನಿಲ್ಲಿಸಿದ್ದ ಚಾಲಕನ ಜಾಗರೂಕತೆಯಿಂದಾಗಿ ಅನಾಹುತವೊಂದು ತಪ್ಪಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ನದಿಯಲ್ಲೇ ಬೋಟ್ ನಿಂತಿದ್ದು, ಬೋಟ್ನಲ್ಲಿ ಸಿಲುಕಿನ ಜನರ ಪರದಾಟ ಹೇಳತೀರದಂತಾಗಿತ್ತು. ಹಾಡಿ ಜನರು ಆನೆಕ್ಯಾಂಪ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸದ್ಯ ಬೇರೆ ಬೋಟ್ ಸಹಾಯದಿಂದ ಬೋಟ್ನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ.

Join Whatsapp
Exit mobile version