ಹಣಕ್ಕಾಗಿ ಟೆಕ್ಕಿಯ ಅಪಹರಣ: ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

Prasthutha|

ಬೆಂಗಳೂರು: ಸ್ನೇಹಿತರೇ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಅಪಹರಿಸಿ 2 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಬೇಧಿಸಿರುವ ಕೋರಮಂಗಲ ಪೊಲೀಸರು, ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -


ಅಪಹರಣಕ್ಕೊಳಗಾದ ಸಾಫ್ಟ್ ವೇರ್ ಇಂಜಿನಿಯರ್ ವಿನೀತ್ ಅವರು ರಕ್ಷಿಸಲ್ಪಟ್ಟವರು. ಅಪಹರಣಕಾರರಾದ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗನ್ ಎಂಬವರನ್ನು ಬಂಧಿಸಲಾಗಿದೆ.
ಸಾಫ್ಟ್ ವೇರ್ ಇಂಜಿನಿಯರ್ ವಿನೀತ್ ಕೆಲ ತಿಂಗಳ ಹಿಂದೆ ಸ್ಟಾರ್ಟಪ್ ಕಂಪನಿ ಆರಂಭಿಸಿ ಕಬೇರೊಂದು ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದರ ನಡುವೆ ಆರೋಪಿ ಪ್ರಶಾಂತ್ ಹಾಗೂ ಸಂತೋಷ್ ನೊಂದಿಗೆ ವಿನೀತ್ ಹಣಕಾಸಿನ ವ್ಯವಹಾರ ಹೊಂದಿದ್ದರು. ಆದರೆ ವಿನೀತ್ ಆರೋಪಿಗಳಿಗೆ ಕೊಡಬೇಕಾದ ಹಣ ನೀಡಲು ನಿರಾಕರಿಸಿದ್ದ. ಅಲ್ಲದೆ ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿಗೂ ವಿನೀತ್ ಹಣ ನೀಡಬೇಕಾಗಿತ್ತು.ಇದರಿಂದ ರೋಷಗೊಂಡ ಸ್ನೇಹಿತರು ವಿನೀತ್ ನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂದು ಯೋಜನೆ ರೂಪಿಸಿ ಸ್ನೇಹಿತನಿಂದ ಫೋರ್ಡ್ ಕಾರು ಪಡೆದು ಪಾರ್ಟಿಗೆ ಆಹ್ವಾನಿಸಿದ್ದರು.
ಅಪಹರಣ ಸಂಚು ಅರಿಯದ ವಿನೀತ್, ಸ್ನೇಹಿತರ ಜೊತೆ ಕಾರು ಹತ್ತಿದ್ದಾನೆ. ಕೋರಮಂಗಲ -ಸಿಲ್ಕ್ ಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕ್ರಾಸ್ ಆಗುತ್ತಿದ್ದಂತೆ ಅನುಮಾನಗೊಂಡು ವಿನೀತ್, ಎಲ್ಲಿಗೆ ಹೋಗುತ್ತಿರುವುದಾಗಿ ಪ್ರಶ್ನಿಸಿದ್ದಾನೆ. ಈ ವೇಳೆ ಅಸಲಿ ಮುಖ ಪ್ರದರ್ಶಿಸಿದ ಕಿರಾತಕರು, ವಿನೀತ್ ಬಾಯಿಗೆ ಬಟ್ಟೆ ತುರುಕಿ ಕಿರುಚಾಡದಂತೆ ಬೆದರಿಸಿದ್ದಾರೆ.


ವಿನೀತ್ನನ್ನು ಆರೋಪಿಗಳು ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಇತ್ತ ಎರಡು ದಿನ ಕಳೆದರೂ ಮಗ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ 2 ಕೋಟಿ ರೂ ಕೊಟ್ಟರೆ ಬಿಡುವುದಾಗಿ ಆರೋಪಿಗಳು ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಪತ್ತೆಯಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಇಳಿದು ಕಾರಿನ ನೋಂದಣಿ ಸಂಖ್ಯೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಜಾಡು ಹಿಡಿದಾಗ ಆರೋಪಿ ಪ್ರಶಾಂತ್ ಸ್ನೇಹಿತರೊಬ್ಬರಿಂದ ಪೋರ್ಡ್ ಕಾರು ಪಡೆದಿರುವುದು ಗೊತ್ತಾಗಿತ್ತು.
ಕಾರಿನ ಮಾಲೀಕನನ್ನು ಕರೆಯಿಸಿ ವಿಚಾರಿಸಿದಾಗ ಆರೋಪಿಗಳು ಕಾರು ಪಡೆದಿರುವುದು ದೃಢವಾಗಿತ್ತು. ಬಳಿಕ ತಮಗೆ ಬಂದ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿರುವ ಮೆಸೇಜ್ ಬಂದಿರುವುದನ್ನು ಮಾಲೀಕ ಪೊಲೀಸರಿಗೆ ತೋರಿಸಿದ್ದ.
ಎಲೆಕ್ಟ್ರಾನಿಕ್ ಸಿಟಿ ಟೋಲ್ನಲ್ಲಿ ಕಾರು ಹೋಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದು ಆರೋಪಿಗಳು ತಮಿಳುನಾಡಿನಲ್ಲಿ ಇರುವ ಬಗ್ಗೆ ಪೊಲೀಸರಿಗೆ ಖಚಿತವಾದ ಮಾಹಿತಿ ಲಭ್ಯವಾಗಿದೆ.
ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿ ಆರೋಪಿಗಳ ಮೊಬೈಲ್ ಲೊಕೇಷನ್ ಆಧರಿಸಿ ಉಳಿದುಕೊಂಡಿದ್ದ ಹೋಟೆಲ್ ನಿಂದ ಆರೋಪಿಗಳನ್ನು ಬಂಧಿಸಿ ಟೆಕ್ಕಿ ವಿನೀತ್ ರನ್ನು ರಕ್ಷಿಸಿದ್ದಾರೆ.

- Advertisement -

ಹಣಕ್ಕಾಗಿ ಅಪಹರಣಕ್ಕೀಡಾಗಿದ್ದ ಟೆಕ್ಕಿಯನ್ನು ಕೋರಮಂಗಲ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಟೆಕ್ಕಿ ವಿನೀತ್ ವರ್ಧನ್ ರಕ್ಷಿಸಲ್ಪಟ್ಟವರು. ಇವರನ್ನು ಮತ್ತೊಬ್ಬ ಟೆಕ್ಕಿ ಎಡ್ವಿನ್ ಪ್ರಶಾಂತ್ ಮತ್ತು ಆತನ ತಂಡ ಕಿಡ್ನ್ಯಾಪ್ ಮಾಡಿತ್ತು. ಈ ಘಟನೆ ಆಗಸ್ಟ್ ತಿಂಗಳಲ್ಲಿ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.
ಹಣದ ವಿಚಾರಕ್ಕೆ ವಿನೀತ್ ವರ್ಧನ್ ಕಿಡ್ನ್ಯಾಪ್ ಆಗಿತ್ತು. ಅಪಹರಣಕಾರರು 50 ಕಿಲೋಮೀಟರ್ ದೂರ ಕ್ರಮಿಸಿ ಸಂತ್ರಸ್ತ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕರೆ ಮಾಡಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳು ಸಂಚರಿಸುತ್ತಿದ್ದ ಕಾರಿನ ಫಾಸ್ಟ್ ಟ್ಯಾಗ್ ಮೂಲಕ ಸುಳಿವು ಪಡೆದ ಕೋರಮಂಗಲ ಪೊಲೀಸರು, ಕಾರ್ಯಾಚರಣೆ ನಡೆಸಿ ಎಡ್ವಿನ್ ಪ್ರಶಾಂತ್, ಸಂತೋಷ್, ಅರಿವೇಗಲನ್ ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

Join Whatsapp