ಶಿಕ್ಷಕಿಯರ ಜಗಳ: ಮೂಕಪ್ರೇಕ್ಷರಾದ ಮಕ್ಕಳು

Prasthutha|

ಪಾಟ್ನಾ: ಮುಖ್ಯಶಿಕ್ಷಕಿ ಹಾಗೂ ಸಹಾಯಕ ಶಿಕ್ಷಕಿ ಶಾಲೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ.


ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ನಡುವೆ ಈ ಗಲಾಟೆ ನಡೆದಿದೆ. ಸದ್ಯ ಜಗಳದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -


ಶಾಲೆಯ ಇಬ್ಬರು ಶಿಕ್ಷಕಿಯರು ಪರಸ್ಪರ ಜಗಳವಾಡುತ್ತಿದ್ದರೆ, ಶಾಲಾ ಮಕ್ಕಳು ಮೂಕಪ್ರೇಕ್ಷಕರಂತೆ ಜಗಳ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಒಳಗೆ ಆರಂಭವಾದ ಗಲಾಟೆ ಹೊರಗಿನ ಮೈದಾನದವರೆಗೂ ತಲುಪಿದೆ. ಕೆಳಗೆ ಬಿದ್ದುಕೊಂಡು ಮಣ್ಣಿನಲ್ಲೇ ಇಬ್ಬರು ಒದ್ದಾಡುತ್ತಾ ಗುದ್ದಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

- Advertisement -