Home ಟಾಪ್ ಸುದ್ದಿಗಳು ವಿದ್ಯಾರ್ಥಿನಿಗಳೊಂದಿಗೆ ಶಿಕ್ಷಕರ ಅಶ್ಲೀಲ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: IIT ವಿದ್ಯಾರ್ಥಿ ಬಂಧನ

ವಿದ್ಯಾರ್ಥಿನಿಗಳೊಂದಿಗೆ ಶಿಕ್ಷಕರ ಅಶ್ಲೀಲ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: IIT ವಿದ್ಯಾರ್ಥಿ ಬಂಧನ

ಹೊಸದಿಲ್ಲಿ: ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ಶಿಕ್ಷಕರು ಮತ್ತು ವಿದ್ಯಾರ್ಥಿನಿಗಳ ಅಶ್ಲೀಲ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ IIT ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಬಂಧನಕ್ಕೊಳಗಾದ ವಿದ್ಯಾರ್ಥಿಯನ್ನು ಪಾಟ್ನಾ ಮೂಲದ 19 ವರ್ಷದ ಮಹಾವೀರ್ ಎಂದು ಗುರುತಿಸಲಾಗಿದೆ. ಮಹಾವೀರ್ ಐಐಟಿ ಖರಕ್‌ಪುರದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.

ಆತ ಉತ್ತರ ದೆಹಲಿಯ ಶಾಲೆಯ ಸುಮಾರು 50 ವಿದ್ಯಾರ್ಥಿನಿಗಳು ಮತ್ತು ಶಿಕ್ಷಕರ ಅಶ್ಲೀಲ ಚಿತ್ರಗಳನ್ನು ಮಾರ್ಫ್ ಮಾಡಿ ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದನು. ವಿದ್ಯಾರ್ಥಿನಿಯರ ಚಿತ್ರಗಳನ್ನು ಮಾರ್ಫ್ ಮಾಡಿದ ನಂತರ, ತನ್ನ ಹೆಸರಿನಲ್ಲಿ ರಚಿಸಲಾದ ನಕಲಿ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದನು.

ಶಾಲಾಧಿಕಾರಿಗಳ ದೂರಿನ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ವಿವಿಧ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಶಿಕ್ಷಕರಿಗೆ ಕರೆ ಮಾಡಿ ಅವಮಾನಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೋ, ಐಟಿ ಕಾಯ್ದೆಗಳನ್ನು ದಾಖಲಿಸಲಾಗಿದೆ.

Join Whatsapp
Exit mobile version