ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್: ಶಿಕ್ಷಕ ಗುರುರಾಜ್ ಬಂಧನ

Prasthutha|

ಮಂಗಳೂರು: ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ , ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷಕನೋರ್ವನನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

- Advertisement -

ಬಂಧಿತ ಶಿಕ್ಷಕ ರಾಯಚೂರು ಮೂಲದ ಗುರುರಾಜ್ ಎಂದು ಗುರುತಿಸಲಾಗಿದ್ದು,  ಕಳೆದ ಹಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಪ್ರೌಢ ಶಾಲೆಯಲ್ಲಿ ಪ್ರಾಧ್ಯಾಪನಾಗಿದ್ದಾನೆ.

 ಈತನ ಕೃತ್ಯಕ್ಕೆ ಆತನ ಪತ್ನಿ ರಾಜೇಶ್ವರಿ ಕೂಡ ಸಾಥ್ ನೀಡಿದ್ದು, ವಿದ್ಯಾರ್ಥಿನಿಯ ವಿವಸ್ತ್ರಗೊಳಿಸಿದ ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಬೆದರಿಸುತ್ತಿದ್ದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಈ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಗುರುರಾಜ್ ಮತ್ತು ಆತನ ಪತ್ನಿ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.



Join Whatsapp