ಹೊಸದಿಲ್ಲಿ: ವಿದ್ಯಾರ್ಥಿಯನ್ನು ಕಟ್ಟಡದ ಮೇಲೆ ಕೊಂಡು ಹೋಗಿ ತಲೆಕೆಳಗಾಗಿ ಹಿಡಿದುಕೊಂಡು ಕೆಳಗೆ ಬೀಳಿಸುತ್ತೇನೆಂದು ಬೆದರಿಕೆ ಹಾಕಿದ್ದ ಶಿಕ್ಷಕನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಮಿರ್ಝಾಪುರದ ಶಾಲೆಯೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಸೋನು ಯಾದವ್ ಎಂಬ ಹೆಸರಿನ ಎರಡನೇ ತರಗತಿಯ ಮಗುವನ್ನು ತಲೆಕೆಳಗಾಗಿ ಹಿಡಿದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಾಗಲೇ ಪೊಲೀಸರು ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ ನನ್ನು ಬಂಧಿಸಿದ್ದಾರೆ.