ಪ್ರಧಾನಿ ಮೋದಿಗೆ ಗಡ್ಡ ತೆಗೆಯಲು 100 ರೂ. ಕಳುಹಿಸಿದ ಚಹಾ ವ್ಯಾಪಾರಿ!

Prasthutha|

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಗಡ್ಡ ತೆಗೆಸಿಕೊಳ್ಳಲು ಮಹಾರಾಷ್ಟ್ರದ ಬಾರಾಮತಿಯ ಚಹಾ ಮಾರಾಟಗಾರನೊಬ್ಬ 100 ರೂ. ಕಳುಹಿಸಿದ್ದಾನೆ. ಅಲ್ಲದೆ, ಪತ್ರವೊಂದನ್ನೂ ಬರೆದಿದ್ದಾನೆ.

ಪ್ರಧಾನಿಗೆ ಪತ್ರ ಬರೆದಿರುವ ಚಹಾ ವ್ಯಾಪಾರಿ ಅನಿಲ್‌ ಮೋರೆ, ಪ್ರಧಾನಿ ಗಡ್ಡ ಬೆಳೆಸಿದ್ದಾರೆ, ಆದರೆ ಏನನ್ನಾದರೂ ಬೆಳೆಸುವುದಾದರೆ, ದೇಶದ ಜನತೆಗೆ ಉದ್ಯೋಗವಕಾಶಗಳನ್ನು ಬೆಳೆಸಿ, ಲಸಿಕೆಯನ್ನು ಹೆಚ್ಚಿಸಿ, ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿ ಎಂದು ಬರೆದಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಲಾಕ್‌ ಡೌನ್‌ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಅವರು ತಮ್ಮ ಅಸಮಾಧಾನ ಹೀಗೆ ಹೊರಹಾಕಿದ್ದಾರೆ.

- Advertisement -

ಕಳೆದ ಎರಡು ಲಾಕ್‌ ಡೌನ್‌ ಗಳಿಂದ ಕಂಗೆಟ್ಟಿರುವ ಜನತೆಯ ಸಮಸ್ಯೆಗಳು ನಿವಾರಣೆಯಾಗುವಂತೆ ಪ್ರಧಾನಿ ಮೋದಿ ಖಾತ್ರಿ ಪಡಿಸಬೇಕು ಎಂದು ಅವರು ಹೇಳಿದ್ದಾರೆ. ನನ್ನ ಉಳಿತಾಯದ ಹಣದಿಂದ 100 ರೂ. ಅವರಿಗೆ ಕಳುಹಿಸಿದ್ದೇನೆ. ಅವರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ದೇಶದ ಬಡಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯಲು ಹೀಗೆ ಮಾಡಿದ್ದೇನೆ ಎಂದು ಅನಿಲ್‌ ಮೋರೆ ತಿಳಿಸಿದ್ದಾರೆ.

- Advertisement -