Home ಟಾಪ್ ಸುದ್ದಿಗಳು ಟೀ ಮಾರುವ ವ್ಯಕ್ತಿಯ ಪುತ್ರಿ ಸಿಎ ಪಾಸ್‌: ಮಗಳ ಸಾಧನೆಗೆ ಭಾವುಕನಾದ ಅಪ್ಪ

ಟೀ ಮಾರುವ ವ್ಯಕ್ತಿಯ ಪುತ್ರಿ ಸಿಎ ಪಾಸ್‌: ಮಗಳ ಸಾಧನೆಗೆ ಭಾವುಕನಾದ ಅಪ್ಪ

ನವದೆಹಲಿ: ಟೀ ಮಾರುವ ವ್ಯಕ್ತಿಯ ಪುತ್ರಿ ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿರುವ ಸಿಎ(ಚಾರ್ಟೆಡ್‌ ಅಕೌಂಟೆಂಟ್) ಪರೀಕ್ಷೆಯನ್ನು ಪಾಸು ಮಾಡಿ ಸಾಧನೆ ಮಾಡಿದ್ದಾರೆ. ಮಗಳ ಈ ಅದ್ಭುತ ಸಾಧನೆಗೆ ಅಪ್ಪನೂ ಭಾವುಕರಾಗಿದ್ದಾರೆ.

ಅಪ್ಪ ಮಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೆ ಕಷ್ಟದಿಂದಲೇ ಮೇಲೆ ಬಂದು ಸಿಎ ಪಾಸ್ ಮಾಡಿದ ಯುವತಿಯ ಹೆಸರು ಅಮಿತಾ ಪ್ರಜಾಪತಿ, ಈಕೆ ಈಗ ಭಾರತದಾದ್ಯಂತ ಲಕ್ಷಾಂತರ ಸಿಎ ಹುದ್ದೆ ಆಕಾಂಕ್ಷಿಗಳಿಗೆ ಪ್ರೇರಣೆ ಆಗಿದ್ದಾರೆ. ದೆಹಲಿಯ ಸ್ಲಮ್‌ವೊಂದರಲ್ಲಿ ಹುಟ್ಟಿ ಬೆಳೆದ ಅಮಿತಾ ಪ್ರಜಾಪತಿ ಸಾಧಿಸುವ ಛಲವಿದ್ದರೆ, ಸಾಧನೆಗೆ ಯಾವುದು ಕೂಡ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ತಮ್ಮ ಈ ಸಾಧನೆಗಾಗಿ 10 ವರ್ಷ ಮಾಡಿದ ಪರಿಶ್ರಮದ ತಪಸ್ಸಿನ ಬಗ್ಗೆ ಬಗ್ಗೆ ಲಿಂಕ್ಡಿನ್‌ನಲ್ಲಿ ಮಾಹಿತಿ ನೀಡಿದ್ದಾರೆ. ನಾನು ಈ ಸಾಧನೆ ಮಾಡಲು ಸುಮಾರು 10 ವರ್ಷ ಹಿಡಿದವು, ಪ್ರತಿದಿನವೂ ಇದೊಂದನ್ನು ಸಾಧಿಸಬೇಕು ಎಂದು ಕನಸು ಕಾಣುತ್ತಿದ್ದೆ. ಇದು ಕನಸ ಅಥವಾ ಇದು ನನಸಾಗಲಿದೆಯೇ ಎಂದು ನಾನು ಪ್ರತಿದಿನವೂ ನನ್ನನ್ನು ಪ್ರಶ್ನಿಸಿಕೊಳ್ಳುತ್ತಿದೆ. ಕಡೆಯದಾಗಿ ಜುಲೈ 11 ರಂದು ನನ್ನ ಬಹುವರ್ಷಗಳ ಕನಸು ನನಸಾಯ್ತು.

ಜೀವನೋಪಾಯಕ್ಕಾಗಿ ಟೀ ಮಾರುತ್ತಿದ್ದ ನನ್ನ ತಂದೆಗೆ ಅನೇಕರು, ನೀನು ಚಹಾ ಮಾರಿ ಆಕೆಯ ಶಿಕ್ಷಣದ ವೆಚ್ಚವನ್ನು ಪೂರೈಸಲು ಸಾಧ್ಯವಿಲ್ಲ, ಅದರ ಬದಲು ಹಣ ಉಳಿಸಿ ಮನೆಕಟ್ಟು, ಬೆಳೆದಿರುವ ಮಗಳ ಜೊತೆ ಎಷ್ಟು ದಿನ ಅಂತ ನೀನು ಬೀದಿಯಲ್ಲಿ ಬದುಕುವೆ? ಎಷ್ಟೇ ಆದರೂ ಅವರು ಬೇರೆಯವರ ಆಸ್ತಿಯಾಗಿರುವುದರಿಂದ ಅವರು ಬಿಟ್ಟು ಹೋಗುತ್ತಾರೆ? ಹಾಗೂ ನಿನ್ನ ಬಳಿ ಕಡೆಗೆ ಏನು ಉಳಿಯುವುದಿಲ್ಲ ಎಂದು ಹೇಳುತ್ತಿದ್ದರು. ಹೌದು ಖಂಡಿತವಾಗಿಯೂ, ನಾನು ಸ್ಲಮ್‌ನಲ್ಲಿ ವಾಸ ಮಾಡುತ್ತಿದ್ದೇನೆ. (ತುಂಬಾ ಕಡಿಮೆ ಜನರಿಗೆ ಈ ಬಗ್ಗೆ ಗೊತ್ತು), ಆದರೆ ನನಗೆ ಈಗ ಆ ವಿಚಾರದ ಬಗ್ಗೆ ನಾಚಿಕೆ ಇಲ್ಲ ಎಂದು ಅಮಿತಾ ಪ್ರಜಾಪತಿ ಹೇಳಿಕೊಂಡಿದ್ದಾರೆ.

Join Whatsapp
Exit mobile version