Home ಟಾಪ್ ಸುದ್ದಿಗಳು ಆಂಧ್ರ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ | ಟಿಡಿಪಿ ನಾಯಕ ಪಟ್ಟಾಭಿರಾಮ್ ಬಂಧನ

ಆಂಧ್ರ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ | ಟಿಡಿಪಿ ನಾಯಕ ಪಟ್ಟಾಭಿರಾಮ್ ಬಂಧನ

ವಿಜಯವಾಡ: ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತೆಲುಗು ದೇಶಂ ಪಕ್ಷದ(ಟಿಡಿಪಿ) ರಾಷ್ಟ್ರೀಯ ವಕ್ತಾರ ಕೆ. ಪಟ್ಟಾಭಿರಾಮ್ ನನ್ನು, ಪೊಲೀಸರು ಇಂದು ಬಂಧಿಸಿದ್ದಾರೆ.

ಟಿಡಿಪಿ ನಾಯಕನನ್ನು ವಿಜಯವಾಡ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮಹಾ ನಿರ್ದೇಶಕ ಗೌತಮ್ ಸವಾಂಗ್ ತಿಳಿಸಿದ್ದಾರೆ.

ಈ ಮಧ್ಯೆ ಬುಧವಾರ ಮುಂಜಾನೆ ಮಂಗಳಗಿರಿಯ ಟಿಡಿಪಿಯ ಪ್ರಧಾನ ಕಚೇರಿ ಮತ್ತು ವಿಜಯವಾಡದಲ್ಲಿರುವ ರಾಮ್ ಅವರ ನಿವಾಸವನ್ನು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈ.ಎಸ್.ಆರ್.ಸಿ.ಪಿ)ದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.

ಗುಂಟೂರಿನ ಮಂಗಳಗಿರಿಯಲ್ಲಿರುವ ಟಿಡಿಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟ್ಟಾಭಿ ರಾಮ್, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆಯ ನಂತರ ಉಭಯ ಪಕ್ಷಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದರು.

Join Whatsapp
Exit mobile version