ಉಳ್ಳಾಲ: ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ನಗರಸಭೆಗೆ ಪಾವತಿಸದೆ ಅಧಿಕಾರಿಗಳು ತೆರಿಗೆ ಹಣ ಲೂಟಿ ಮಾಡುತ್ತಿರುವುದನ್ನು ವಿರೋಧಿಸಿ ಸ್ವಪಕ್ಷದ ಸದಸ್ಯರೊಬ್ಬರು ಅರೆನಗ್ನವಾಗಿ ಪ್ರತಿಭಟಿಸಿದ ಘಟನೆಯು ನಡೆದಿದೆ.
ಉಳ್ಳಾಲ ನಗರಸಭೆ ಸದಸ್ಯ ರವಿಚಂದ್ರ ಯಾನೆ ಪಾನಕ ರವಿ, ನಗರಾಡಳಿತ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಮತ್ತು ಸಾರ್ವಜನಿಕರಿಗೆ ಅನುದಾನ ಮಂಜೂರು ಮಾಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಅರೆನಗ್ನವಾಗಿ ಪ್ರತಿಭಟಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಟ್ಟಡಗಳಿಗೆ ಡೋರ್ ನಂಬರ್ ನೀಡಲು, ಅಧ್ಯಕ್ಷರಾದ ಚಿತ್ರಕಲಾ ಮತ್ತು ಉಪಾಧ್ಯಕ್ಷ ಅಯ್ಯೂಬ್ ಜನರಿಂದ ನಲ್ವತ್ತರಿಂದ ಐವತ್ತು ಸಾವಿರ ಲಂಚ ಪಡೆಯುತ್ತಾರೆ ಎಂದು ಆರೋಪಿಸಿದರು ಮತ್ತು ನಗರಾದ್ಯಂತ ಸಂಗ್ರಹಿಸಿದ ತೆರಿಗೆ ಹಣವನ್ನೂ ನಗರಸಭೆಗೆ ಪಾವತಿಸದೆ , ನಕಲಿ ರಶೀದಿ ಕೊಟ್ಟು ಜನರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.