ನವದೆಹಲಿ: ಏರ್ ಏಷ್ಯಾ ಏವಿಯೇಷನ್ ಗ್ರೂಪ್ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ನೇತೃತ್ವದ ಏರ್ ಇಂಡಿಯಾಗೆ ಮಾರಾಟ ಮಾಡಿದೆ.
ಭಾರತದ ಪ್ರಮುಖ ಟಾಟಾ ಸಮೂಹದೊಂದಿಗೆ ಕೆಲಸ ಮಾಡಿದ ಅನುಭವ ನಮಗಿದೆ ಎಂದು ಏರ್ ಏಷ್ಯಾ ಏವಿಯೇಷನ್ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋ ಲಿಂಗಮ್ ಹೇಳಿದ್ದಾರೆ.
2014 ರಲ್ಲಿ ನಾವು ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು. ಆಗಿನಿಂದಲೂ ಏರ್ ಏಷ್ಯಾ ಭಾರತದಲ್ಲಿ ಉತ್ತಮ ವ್ಯವಹಾರ ಮಾಡುತ್ತಿದೆ. ಇಂದು ವಿಶ್ವದ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಬೋ ಲಿಂಗಮ್ ಏರ್ ಇಂಡಿಯಾವನ್ನು ಪ್ರಶಂಸಿದ್ದಾರೆ. ಆ ಸಂಸ್ತೆಗೆ ತಮ್ಮ ಪಾಲನ್ನು ಮಾರಾಟ ಮಾಡಿರುವುದರಲ್ಲಿ ತೃಪ್ಪಿ ಇದೆಯೆಂದೂ ಹೇಳಿದ್ದಾರೆ.