ಕ್ರಿಕೆಟಿಗ ಮೊಯೀನ್ ಅಲಿಗೆ ಧಾರ್ಮಿಕ ಅವಹೇಳನಗೈದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ | ಸರತಿ ಸಾಲಿನಲ್ಲಿ ಅಲಿಗೆ ಬೆಂಬಲವಾಗಿ ನಿಂತ ಆಂಗ್ಲರ ಕ್ರಿಕೆಟ್ ಪಡೆ !

Prasthutha|

►ಟ್ವೀಟ್ ಡಿಲೀಟ್ ಆದ ಬಳಿಕವೂ ಸಮರ್ಥಿಸಿದ ತಸ್ಲೀಮಾ !

- Advertisement -

ಸದಾ ಮತಾಂಧತೆಯ ಅಮಲಿನಲ್ಲೇ ಮುಳುಗಿ ಒಂದಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯಲು ಹವಣಿಸುತ್ತಿರುವ ಬಾಂಗ್ಲಾ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ರ ವಕ್ರ ಕಣ್ಣುಇತ್ತೀಚೆಗೆ ಇಂಗ್ಲಂಡ್ ಕ್ರಿಕೆಟಿಗ ಮೊಯೀನ್ ಅಲಿಯ ಮೇಲೆ ಬಿದ್ದಿತ್ತು. ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೊಯೀನ್ ಅಲಿ ಕ್ರಿಕೆಟಿಗನಾಗಿ ಗುರುತಿಸದೇ ಇದ್ದಿದ್ದರೆ ಸಿರಿಯಾಕ್ಕೆ ತೆರಳಿ ಐಸಿಸ್ ಗೆ ಸೇರುತ್ತಿದ್ದರು ಎಂದು ಟ್ವೀಟ್ ಮಾಡಿದ್ದರು.

ತಮ್ಮ ತಂಡದ ಸಹೋದ್ಯೋಗಿಯ ಪರವಾಗಿ ತಸ್ಲೀಮಾರ ಅವಹೇಳನಕಾರಿ ಟ್ವೀಟನ್ನು ಸಹಿಸದ ಇಂಗ್ಲಂಡ್ ತಂಡದ ಸಹೋದ್ಯೋಗಿಗಳು ತಂಡೋಪತಂಡವಾಗಿ ತಸ್ಲೀಮಾರ ವಿರುದ್ಧ ಟ್ವಿಟ್ಟರ್ ಯುದ್ಧ ನಡೆಸಿದ್ದಾರೆ. ಈ ಬೆಳವಣಿಗೆಯಲ್ಲಿ ಮೊದಲು ಕಾಣಿಕೊಂಡು ಮೊಯೀನ್ ಅಲಿ ಪರ ಬ್ಯಾಟಿಂಗ್ ಬೀಸಿದ್ದು ವೇಗದ ಬೌಲರ್ ಜೋಫ್ರಾ ಅರ್ಚರ್. ಅವರು ತನ್ನ ಟ್ವೀಟ್ ನಲ್ಲಿ ತಲೀಮಾ ಅವರನ್ನು ನೇರವಾಗಿ “ನೀವು ಸರಿಯಿದ್ದೀರಾ? ನನಗನಿಸುತ್ತದೆ ನಿಮಗೆ ಸರಿಯಿಲ್ಲವೆಂದು” ಎನ್ನುತ್ತಾ ತಿರುಗೇಟು ನೀಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಅವರು, “ಇದು ವ್ಯಂಗ್ಯವೇ? ಆದ್ರೆ ಯಾರೂ ನಗುತ್ತಿಲ್ಲ, ನೀವೂ ಕೂಡಾ ನಗುತ್ತಿಲ್ಲ. ನಿಮಗೆ ಒಳಿತೇನೆಂದರೆ ಈ ಟ್ವೀಟನ್ನು ಡಿಲೀಟ್ ಮಾಡುವುದಾಗಿದೆ” ಎಂದು ಖಾರವಾಗಿ ಮತ್ತೊಮ್ಮೆ ಟ್ವೀಟ್ ಮಾಡಿದ್ದರು.

- Advertisement -

ಇದರ ಜೊತೆಗೆ ಇಂಗ್ಲಂಡ್ ನ ಮತ್ತೋರ್ವ ವೇಗದ ಬೌಲರ್ ಸಾಕಿಬ್ ಮುಹಮ್ಮದ್ ಅವರು, “ಇದನ್ನು ನಂಬಲಾಗುತ್ತಿಲ್ಲ,ಅಸಹ್ಯಕರ ಟ್ವೀಟ್ ಇದು. ತಸ್ಲೀಮಾ ಕೂಡಾ ಅಸಹ್ಯಕರ ವ್ಯಕ್ತಿ” ಎಂದು ಟ್ವೀಟ್ ಮಾಡಿದ್ದಾರೆ.

ಸಾಕಿಬ್ ಅವರ ಟ್ವೀಟ್ ಗೆ ಮರು ಉತ್ತರ ನೀಡಿರುವ ಇಂಗ್ಲಂಡಿನ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್, ತಸ್ಲೀಮಾ ಅವರ ಟ್ವಿಟ್ಟರ್ ಖಾತೆಯನ್ನು ರಿಪೋರ್ಟ್ ಮಾಡುವಂತೆ ವಿನಂತಿಸಿದ್ದಾರೆ.

  ಇಂಗ್ಲಂಡ್ ತಂಡದ ಬ್ಯಾಟ್ಸ್’ಮನ್ ಆಗಿರುವ ಬೆನ್ ಡಕೆಟ್ ಅವರು, “ ಈ ಆಪ್ ನ ಸಮಸ್ಯೆ ಇದುವೇ. ಜನರು ಈ ರೀತಿ ತಮಗೆ ತೋಚಿದ್ದನ್ನು ಬರೆಯಬಹುದಾಗಿದೆ, ಅಸಹ್ಯಕರ. ಈ ಪರಿಸ್ಥಿತಿ ಬದಲಾಗಬೇಕಾಗಿದೆ. ಎಲ್ಲರೂ ಈ ಖಾತೆಯನ್ನು ರಿಪೋರ್ಟ್ ಮಾಡಿ ಎಂದು ವಿನಂತಿಸಿದ್ದಾರೆ.

ಇಂಗ್ಲಂಡ್ ಕ್ರಿಕೆಟಿಗರಲ್ಲದೆ ಹಲವಾರು ಪ್ರಮುಖ ಟ್ವಿಟ್ಟರಿಗರು ತಸ್ಲೀಮಾ ಅವರ ಟ್ವೀಟಿಗೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾರೆ.  ಸದ್ಯಕ್ಕೆ ತಸ್ಲೀಮಾ ಅವರ ಟ್ವೀಟ್ ಡಿಲೀಟ್ ಆಗಿದೆ. ಆದರೆ ಆ ಬಳಿಕವೂ ಅವರು ತನ್ನ ವಿವಾದಾತ್ಮಕ ಟ್ವೀಟನ್ನು ಸಮರ್ಥಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ತಾನು ಮುಸ್ಲಿಮ್ ಸಮುದಾಯವನ್ನು ಜಾತ್ಯಾತೀತಕರಣಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.  

Join Whatsapp