ವಿಮಾನ ದುರಂತ | ಟಾರ್ಜನ್‌ ಸಿನೆಮಾ ನಟ ಲಾರಾ, ಪತ್ನಿ ಸೇರಿದಂತೆ ಏಳು ಮಂದಿ ಸಾವು

Prasthutha|

ವಾಷಿಂಗ್ಟನ್‌ : ಜನಪ್ರಿಯ ʼಟಾರ್ಜನ್‌ʼ ಸಿನಿಮಾದ ನಟ ಜೋ ಲಾರಾ, ಅವರ ಪತ್ನಿ ಸೇರಿದಂತೆ ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ.

- Advertisement -

ಫ್ಲೋರಿಡಾದ ಪಾಮ್‌ ಬೀಚ್‌ ನಲ್ಲಿ ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಸ್‌ ಜೆಟ್‌ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ದುದರ್‌ ಫೋರ್ಡ್‌ ಕೌಂಟಿಯ ಅಗ್ನಿ ಮತ್ತು ರಕ್ಷಣಾ ತಂಡ ಫೇಸ್‌ ಬುಕ್‌ ನಲ್ಲಿ ವಿವರಿಸಿದೆ.

ವಿಮಾನದಲ್ಲಿ ಬಾಲಿವುಡ್‌ ನಟ ಲಾರಾ ಸೇರಿದಂತೆ ಏಳು ಮಂದಿ ಇದ್ದಿರುವುದಾಗಿ ಸಿಎನ್‌ ಎನ್‌ ವರದಿ ಮಾಡಿದೆ. ಶನಿವಾರ ರಾತ್ರಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಸಿಆರ್‌ ಪಿಎಫ್‌ ಆರ್‌ ಕಮಾಂಡರ್‌ ಕ್ಯಾಪ್ಟನ್‌ ಜೋಶುವಾ ಸ್ಯಾಂಡರ್ಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -

೧೯೮೯ರ ಟೆಲಿವಿಷನ್‌ ಸಿನೆಮಾ “ಟಾರ್ಜನ್‌ ಇನ್‌ ಮ್ಯಾನ್‌ ಹಟ್ಟನ್‌”ನಲ್ಲಿ ಲಾರಾ ನಟಿಸಿದ್ದರು. ನಂತರ ಟೆಲಿವಿಷನ್‌ ಸರಣಿಯಾದ ಟಾರ್ಜನ್‌; ದ ಎಪಿಕ್‌ ಅಡ್ವೆಂಚರಸ್‌ ನಲ್ಲಿ ನಟಿಸಿ ಜನಪ್ರಿಯಗೊಂಡಿದ್ದರು.

Join Whatsapp