Home ಟಾಪ್ ಸುದ್ದಿಗಳು ಹಿಂದುತ್ವ ಟ್ರೋಲ್: ಜಾಹಿರಾತು ಹಿಂದೆಗೆದ ತನಿಶ್ಕ್

ಹಿಂದುತ್ವ ಟ್ರೋಲ್: ಜಾಹಿರಾತು ಹಿಂದೆಗೆದ ತನಿಶ್ಕ್

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ಹಾಗೂ ಬೆದರಿಕೆಗೊಳಗಾದ ಜನಪ್ರಿಯ ಆಭರಣ ಬ್ರಾಂಡ್ ತನಿಶ್ಕ್ ಹಿಂದೂ-ಮುಸ್ಲಿಮ್ ಮದುವೆ ಜಾಹಿರಾತನ್ನು ಹಿಂತೆಗೆದುಕೊಂಡಿದೆ. ಜಾಹಿರಾತು ಲವ್ ಜಿಹಾದ್ ಪ್ರಚುರಪಡಿಸುತ್ತದೆ ಮತ್ತು ಹಿಂದೂ ವಿರೋಧಿ ಭಾವನೆಯನ್ನು ಪ್ರಚೋದಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಒಂದು ವರ್ಗವು ಆರೋಪಿಸಿತ್ತು.

ಸೋಮವಾರದಂದು #Boycott Tanishq ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ವಿವಾದಿತ ಜಾಹಿರಾತನ್ನು ನಿಷೇಧಿಸಬೇಕೆಂದು ಹಲವರು ಆಗ್ರಹಿಸಿದ್ದರು. ಈಗ ಟ್ರೋಲ್ ಗಳು ಗೆದ್ದಿವೆ. ತನಿಶ್ಕ್ ಫೇಸ್ಬುಕ್ ಮತ್ತು ಟ್ವಿಟ್ಟರ್ ಗಳಿಂದ ಚಿತ್ರವನ್ನು ತೆಗೆದುಹಾಕಿದೆ. ಅದೇವೇಳೆ, ಯೂಟ್ಯೂಬ್ ನಲ್ಲಿ ಚಿತ್ರದ ಲಿಂಕನ್ನು ಪ್ರೈವೇಟ್ ಗೊಳಿಸಲಾಗಿದೆ.

 ಭಾರತದ ಧರ್ಮಾಂಧ ಸಂಸ್ಕೃತಿಯಿಂದಾಗಿ ಒಂದು ಸುಂದರ ಜಾಹಿರಾತನ್ನು ಹಿಂದೆಗೆಯಲಾಗಿದೆ ಎಂದು ಹಲವರು ನಿರಾಶೆ ವ್ಯಕ್ತಪಡಿಸಿದ್ದಾರೆ.

“ಹಿಂದೂ-ಮುಸ್ಲಿಂ ಐಕ್ಯತೆಯನ್ನು ಪ್ರದರ್ಶಿಸುವ ಒಂದು ಸುಂದರ ಜಾಹಿರಾತನ್ನು ಧರ್ಮಾಂಧತೆಯ ಕಾರಣದಿಂದ ಹಿಂದೆಗೆಯಬೇಕಾಗಿ ಬಂದಿರುವುದು ಇಂದಿನ ನಿರಾಶದಾಯಕ ಭಾರತದ ಪುರಾವೆಯಾಗಿದೆ” ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version