Home ಟಾಪ್ ಸುದ್ದಿಗಳು ಸದ್ಗುರು ಜಗ್ಗಿ ವಾಸುದೇವ್ ಒಬ್ಬ ಕಪಟ, ಧರ್ಮದ ವ್ಯಾಪಾರಿ : ತಮಿಳುನಾಡು ಹಣಕಾಸು ಮಂತ್ರಿ ಪಳನಿವೇಲ್

ಸದ್ಗುರು ಜಗ್ಗಿ ವಾಸುದೇವ್ ಒಬ್ಬ ಕಪಟ, ಧರ್ಮದ ವ್ಯಾಪಾರಿ : ತಮಿಳುನಾಡು ಹಣಕಾಸು ಮಂತ್ರಿ ಪಳನಿವೇಲ್

ತಮಿಳುನಾಡಿನ ದೇವಾಲಯಗಳನ್ನು ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ಸ್ (ಎಚ್‌ಆರ್ ಮತ್ತು ಸಿಇ) ಇಲಾಖೆಯು ನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ನೂತನ ಡಿಎಂಕೆ ನೇತೃತ್ವದ ಸರ್ಕಾರ ಹೇಳಿದೆ.


ಕೆಲವು ಸಂಘಟನೆಗಳು ರಾಜ್ಯ ಸರ್ಕಾರದ ನಿಯಂತ್ರಣದಿಂದ ದೇವಾಲಯಗಳು “ಮುಕ್ತವಾಗಬೇಕು” ಎಂಬ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.
ಈಗಿನ ಕಾಲದಲ್ಲಿ ಸರ್ಕಾರಗಳಿಗೆ ವಿಮಾನ, ಕೈಗಾರಿಕೆ, ಮೈನಿಂಗ್ ಮತ್ತು ಮುಂತಾದವುಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ, ಇನ್ನು ಪವಿತ್ರ ದೇವಾಲಯಗಳನ್ನು ಅವು ಹೇಗೆ ನಡೆಸುತ್ತವೆ” ಎಂದು ಈ ಹಿಂದೆ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದರು ”
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಹಣಕಾಸು ಮಂತ್ರಿ ಪಿ ಟಿ ಆರ್ ಪಳನಿವೇಲ್ ತ್ಯಾಗರಾಜನ್ ಜಗ್ಗಿ ವಾಸುದೇವ್ ಒಬ್ಬ ಪ್ರಚಾರ ಪ್ರಿಯ ಮತ್ತು ಹಣ ಮಾಡಲು ಬಯಸುತ್ತಿರುವ ಕಪಟಿ ಎಂದು ಹೇಳಿದ್ದಾರೆ.


ತನ್ನನ್ನು ತಾನು ದೇವಮಾನವ ಎಂದು ಕರೆಸಿಕೊಳ್ಳುವ “ಒಬ್ಬ ದೇವ ಮಾನವನು ಶಿವರಾತ್ರಿ ಟಿಕೆಟ್‌ಗಳನ್ನು ₹ 5,00,000, ₹ 50,000 ಮತ್ತು ₹ 5,000 ಕ್ಕೆ ಮಾರಾಟ ಮಾಡುತ್ತಾನೆಯೇ? ಅದು ದೇವಮಾನವನ ಸಂಕೇತವೇ? ಒಬ್ಬ ಭಕ್ತನನ್ನು ಗುರುತಿಸುವುದು ಹೀಗೆಯಾ? ಜಗ್ಗಿ ವಾಸುದೇವ್ ದೇವ ಮತ್ತು ಧರ್ಮವನ್ನು ಬಳಸಿಕೊಳ್ಳುತ್ತಿರುವಂತಹ ಒಬ್ಬ ಧರ್ಮದ ವ್ಯಾಪಾರಿ” ಎಂದು ಪಿ ಟಿ ಆರ್ ಪಳನಿವೇಲ್ ತ್ಯಾಗರಾಜನ್ ಕಟುವಾಗಿ ಹೇಳಿದ್ದಾರೆ.
ಈ ದೇವಾಲಯಗಳನ್ನು ರಾಜರು ನಿರ್ಮಾಣ ಮಾಡಿದ್ದಾರೆ, ಆದ್ದರಿಂದ ಭಕ್ತರಿಗೆ ನೀಡಬೇಕೆಂದರೆ ಯಾರಿಗೆ ನೀಡಬೇಕು, ಭಕ್ತರನ್ನು ಗುರುತಿಸುವುದು ಯಾರು, ಸಮಿತಿಗಳನ್ನು ಯಾರು ರಚಿಸುತ್ತಾರೆ ಎಂದು ಪಳನಿವೇಲ್ ತ್ಯಾಗರಾಜನ್ ಪ್ರಶ್ನೆ ಮಾಡಿದ್ದಾರೆ.
ಇದರ ಬಗ್ಗೆ ಹೇಳಿಕೆ ನೀಡಿದ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ” ಪಳನಿವೇಲ್ ತ್ಯಾಗರಾಜನ್ ಅವರು ಜಗ್ಗಿ ವಾಸುದೇವ್ ಅವರ ಬಗ್ಗೆ ಕೀಳು ಮಟ್ಟದ ಭಾಷೆಯನ್ನು ಬಳಸಿದ್ದಾರೆ, ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದೆ.

Join Whatsapp
Exit mobile version