Home ಟಾಪ್ ಸುದ್ದಿಗಳು ತಮಿಳುನಾಡು | ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಗೆ ಹಿನ್ನಡೆ

ತಮಿಳುನಾಡು | ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಗೆ ಹಿನ್ನಡೆ

ಚೆನ್ನೈ: ತಮಿಳುನಾಡಿನ 234 ವಿಧಾನಸಭಾಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಎರಡನೆಯ ಸುತ್ತಿನ ಮತ ಎಣಿಕೆ ಮುಗಿದಿದೆ.

ಈ ಸಂದರ್ಭದಲ್ಲಿ ಬಹು ಕುತೂಹಲ ಕೆರಳಿಸಿರುವ ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ ಸಾಧಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಮಲ ಹಾಸನ್‌ಗೆ ತೀವ್ರ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ನ ಮಯೂರ್‌ ಜಯಕುಮಾರ್‌ ಮುನ್ನಡೆಯಲ್ಲಿದ್ದಾರೆ.

ಈ ಬಾರಿ ಇಬ್ಬರು ಖ್ಯಾತ ನಾಯಕರಾದ ಎಂ. ಕೆ ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಗೆ ಸ್ಪರ್ಧೆಯೊಡ್ಡಲು ನಟ ಕಮಲ್ ಹಾಸನ್, ಟಿಟಿವಿ ದಿನಕರನ್ ಮತ್ತು ಸೀಮನ್ ಚುನಾವಣಾ ಕಣಕ್ಕಿಳಿದಿದ್ದು, ಇಂದು ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.

ತಮಿಳುನಾಡಿನಲ್ಲಿ ಡಿಎಂಕೆಯ ಎದುರು ಆಡಳಿತಾರೂಢ ಎಐಎಡಿಎಂಕೆ ಪರಾಭವಗೊಳ್ಳಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿತ್ತು.

Join Whatsapp
Exit mobile version