ಕರ್ಫ್ಯೂ ಅಂತ್ಯ, ಫೆಬ್ರವರಿ 1 ರಿಂದ 1-12 ತರಗತಿಗಳು ಆರಂಭ

Prasthutha|

ಚೆನ್ನೈ; ಕೊರೋನಾ ನಿಯಂತ್ರಣ ಕಾರಣಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲ ಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಮೊದಲ ಹಂತವಾಗಿ ನೈಟ್ ಕರ್ಫ್ಯೂ, ಭಾನುವಾರದ ಲಾಕ್’ಡೌನ್ ಅನ್ನು ತೆರವುಗೊಳಿಸಿದೆ. ಜೊತೆಗೆ 1 ರಿಂದ 12 ನೇ ತರಗತಿಯವರೆಗೆ ಫೆಬ್ರವರಿ 1 ರಿಂದ ತರಗತಿಗಳನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿರ್ಬಂಧಗಳನ್ನು ತೆರವುಗೊಳಿಸಲು ಸ್ಟಾಲಿನ್ ನೇತೃತ್ವದ ಸರ್ಕಾರವು ಮುಂದಾಗಿದೆ.
ಆದರೆ ಕೇಂದ್ರದ ಕೋವಿಡ್-19 ಮಾರ್ಗಸೂಚಿಗಳನ್ನು ಫೆಬ್ರವರಿ 29ರ ವರೆಗೆ ಮುಂದುವರಿಸುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಕೋವಿಡ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದೆ.

- Advertisement -

Join Whatsapp