ನವದೆಹಲಿ: ಅಕ್ಟೋಬರ್ 2ರಂದು ಆರ್ ಎಸ್ ಎಸ್ ನಡೆಸಲು ಉದ್ದೇಶಿಸಿರುವ ‘ರೂಟ್ ಮಾರ್ಚ್’ಗೆ ತಮಿಳುನಾಡು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ತನ್ನ ಪರವಾಗಿ ಆದೇಶ ನೀಡಿದ ಹೊರತಾಗಿಯೂ ತಿರುವಳ್ಳೂರು ಪೊಲೀಸರು ಅಕ್ಟೋಬರ್ 2 ರಂದು ‘ರೂಟ್ ಮಾರ್ಚ್’ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ತಮಿಳುನಾಡು ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
ರಾಜ್ಯ ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ, ಡಿಜಿಪಿ ಸಿ.ಶೈಲೇಂದ್ರ ಬಾಬು, ಸ್ಥಳೀಯ ಎಸ್ಪಿ ಮತ್ತು ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಗೆ ಆರ್ ಎಸ್ ಎಸ್, ಲೀಗಲ್ ನೋಟಿಸ್ ನೀಡಿದ್ದು, ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಏಕೆ ಪ್ರಾರಂಭಿಸಬಾರದು ಎಂದು ಕೇಳಿದೆ.