Home ಟಾಪ್ ಸುದ್ದಿಗಳು ಪಿಎಫ್ ಐ ನಾಯಕರು, ಕಾರ್ಯಕರ್ತರ ಬಂಧನ ವಿರುದ್ಧ ತಮಿಳುನಾಡು ದಲಿತ ಸಂಘಟನೆಗಳಿಂದ ಪ್ರತಿಭಟನೆ

ಪಿಎಫ್ ಐ ನಾಯಕರು, ಕಾರ್ಯಕರ್ತರ ಬಂಧನ ವಿರುದ್ಧ ತಮಿಳುನಾಡು ದಲಿತ ಸಂಘಟನೆಗಳಿಂದ ಪ್ರತಿಭಟನೆ

ಚೆನ್ನೈ: NIA ಹಾಗೂ ED ಅಧಿಕಾರಿಗಳು ಪಿಎಫ್ ಐ ಕಚೇರಿಗಳ ಮೇಲೆ ದಾಳಿ ಮಾಡಿ ಮುಖಂಡರನ್ನು ಬಂಧಿಸಿರುವುದರ ವಿರುದ್ಧ ತಮಿಳುನಾಡಿನ ಸಶಕ್ತ ದಲಿತ ಸಂಘಟನೆಯಾದ ವಿಸಿಕೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದೆ.


ವಿಸಿಕೆ ಸ್ಥಾಪಕ ಮುಖಂಡ ಹಾಗೂ ಪಾರ್ಲಿಮೆಂಟ್ ಸದಸ್ಯರೂ ಆಗಿರುವ ತೋಲ್ ತಿರುಮಾವಲವನ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. ಪಿಎಫ್ ಐಯು ಒಂದು ಪಾರದರ್ಶಕ ಸಂಘಟನೆಯಾಗಿದ್ದು, ಇವರ ಕಚೇರಿ ಮೇಲಿನ ದಾಳಿ ಹಾಗೂ ಕಾರ್ಯಕರ್ತರ ಬಂಧನವನ್ನು ಬಲವಾಗಿ ಖಂಡಿಸುತ್ತೇನೆ ಹಾಗೂ ಈ ಕುರಿತು ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕ್ಷಣದಿಂದ ಪಿಎಫ್ ಐ ಹಾಗೂ ಎಸ್ ಡಿಪಿಐ ಯು ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ನಡೆಸುತ್ತಲೇ ಬಂದಿದ್ದಾರೆ. ಈ ಸಂಘಟನೆ ಹಾಗೂ ಪಕ್ಷವು ಅಸಹಾಯಕರ ಧ್ವನಿಯಾಗಿದೆ. ದೇಶಾದ್ಯಂತ ಏಕಕಾಲಕ್ಕೆ ಪಿಎಫ್ ಐ ಕಚೇರಿಗಳ ಮೇಲೆ ದಾಳಿ ನಡೆಸಿ ಮುಖಂಡರನ್ನು ಬಂಧಿಸಿ ನವದೆಹಲಿಗೆ ಕರೆದೊಯ್ದಿರುವುದು ಅಕ್ಷಮ್ಯ ಎಂದು ಹೇಳಿದರು.

Join Whatsapp
Exit mobile version