Home ಟಾಪ್ ಸುದ್ದಿಗಳು ಏಕಾಏಕಿ ಸರ್ಕಾರಿ ಬಸ್ಸು ಹತ್ತಿದ ಮುಖ್ಯಮಂತ್ರಿ| ಪ್ರಯಾಣಿಕರು ತಬ್ಬಿಬ್ಬು!

ಏಕಾಏಕಿ ಸರ್ಕಾರಿ ಬಸ್ಸು ಹತ್ತಿದ ಮುಖ್ಯಮಂತ್ರಿ| ಪ್ರಯಾಣಿಕರು ತಬ್ಬಿಬ್ಬು!

ಚೆನ್ನೈ: ಸರ್ಕಾರಿ ಬಸ್ಸಿಗೆ ಇದ್ದಕ್ಕಿದ್ದಂತೆ ಹತ್ತಿದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಕಂಡ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.

ಸೋಲಿಂಗನಲ್ಲೂರು ವಿಧಾನಸಭಾ ಕ್ಷೇತ್ರದ ಕಣ್ಣಕಿ ನಗರದಲ್ಲಿರುವ ಕೋವಿಡ್ ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್, ತ್ಯಾಗರಾಯನಗರದಿಂದ ಕಣ್ಣಕಿ ನಗರಕ್ಕೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಎಂ19ಬಿ ಗೆ ಒಮ್ಮೆಲೇ ಹತ್ತಿದ್ದಾರೆ.

ಬೆಂಗಾವಲು ವಾಹನದಲ್ಲಿದ್ದ ಪೊಲೀಸರ ಜೊತೆ ಬಸ್ ಹತ್ತಿದ ಮುಖ್ಯಮಂತ್ರಿಯವರನ್ನು ಕಂಡ ಪ್ರಯಾಣಿಕರು ತಮ್ಮ ಆಸನಗಳಿಂದ ಎದ್ದು ನಿಂತಿದ್ದಾರೆ. ಮುಖ್ಯಮಂತ್ರಿಗಳು ಬಸ್ ನಲ್ಲಿದ್ದ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಬಳಿ ಕುಶಲೋಪರಿ ನಡೆಸಿದ್ದಾರೆ.

ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ಪಡೆದ ಅವರು ಬಸ್ಸಿನಿಂದ ಇಳಿದು ಸೆಕ್ರೆಟರಿಯೇಟ್‌ಗೆ ಮರಳಿದ್ದಾರೆ.
ಈ ಮೊದಲು ಸ್ಟಾಲಿನ್ ರೇಶನ್ ಅಂಗಡಿಗಳು ಮತ್ತು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Join Whatsapp
Exit mobile version