ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರ್ಕಾರ : ಕಾಯ್ದೆ ರದ್ದತಿಗೆ ಸ್ಟಾಲಿನ್ ಆಗ್ರಹ

Prasthutha|

ಚೆನ್ನೈ: ತಮಿಳುನಾಡು ವಿಧಾನಸಭೆಯು ಬುಧವಾರ ಸರ್ವಾನುಮತದಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ಸಂವಿಧಾನದಲ್ಲಿ ಜಾತ್ಯತೀತ ತತ್ವಗಳಿಗೆ ಹೊಂದಿಕೆಯಾಗದ ಈ ಕಾನೂನನ್ನು ರದ್ದುಗೊಳಿಸುವಂತೆ ಒಕ್ಕೂಟ ಸರ್ಕಾರವನ್ನು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.

- Advertisement -

ಕಾನೂನನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಏಕೆತೆ ಮತ್ತು ಕೋಮು ಸೌಹಾರ್ದತೆಯನ್ನು ರಕ್ಷಿಸಲು ಮತ್ತು ಖಚಿತಪಡಿಸುವ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರ ಮುಂದಾಗಲಿ ಎಂದು ತಮಿಳುನಾಡು ಮುಖಮಂತ್ರಿ ಎಮ್.ಕೆ ಸ್ಟಾಲಿನ್ ಆಗ್ರಹಿಸಿದರು. ಮಾತ್ರವಲ್ಲದೆ ಈ ಕಾಯ್ದೆಯ ವಿರುದ್ಧ ನಿರ್ಣಯವನ್ನು ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಸರ್ಕಾರದ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸದನದಿಂದ ಹೊರನಡೆದರೆ, ಎಐಎಡಿಎಂಕೆ ಸದಸ್ಯರು ಸದನಕ್ಕೆ ಗೈರುಹಾಜರಾಗಿದ್ದರು. ಎಐಎಡಿಎಂಕೆ ಮತ್ತು ಬಿಜೆಪಿಯ ಮಿತ್ರ ಪಕ್ಷವಾದ ಪಿಎಂಕೆ ನಿರ್ಣಯವನ್ನು ಬೆಂಬಲಿಸಿದೆ.

Join Whatsapp