Home ಟಾಪ್ ಸುದ್ದಿಗಳು ತಮಿಳುನಾಡು: ದೇವಸ್ಥಾನದಲ್ಲಿ ಕ್ರೇನ್ ಬಿದ್ದು 4 ಮಂದಿ ಸಾವು

ತಮಿಳುನಾಡು: ದೇವಸ್ಥಾನದಲ್ಲಿ ಕ್ರೇನ್ ಬಿದ್ದು 4 ಮಂದಿ ಸಾವು

ಚೆನ್ನೈ: ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ ದೇವಸ್ಥಾನದ ಉತ್ಸವದ ಸಮಯ ಕ್ರೇನ್ ಕುಸಿದು ಬಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಕೆ ನೀಡಲು ನೆರೆದಿದ್ದ ಭಕ್ತರಿಂದ ಹೂವಿನ ಹಾರ ಸ್ವೀಕರಿಸುತ್ತಿದ್ದು, ಕ್ರೇನ್ ಮೂಲಕ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಲಾಗುತ್ತಿತ್ತು. ಆ ಸಮಯದಲ್ಲಿ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರನ್ನು ಎಸ್. ಭೂಪಾಲನ್ (40), ಬಿ. ಜೋತಿಬಾಬು (17), ಕೆ. ಮುತ್ತುಕುಮಾರ್ (39) ಮತ್ತು ಚಿನ್ನಸಾಮಿ (60) ಎಂದು ಗುರುತಿಸಲಾಗಿದೆ.

ರವಿವಾರ ತಡರಾತ್ರಿ ಸಂಭವಿಸಿದ ಈ ಅವಘಡದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕ್ರೇನ್ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version