ಮುಂಬೈ: ಅಕ್ರಮವಾಗಿ ಐಪಿಎಲ್ ಪಂದ್ಯವನ್ನು ಪ್ರಸಾರ ಮಾಡಿದ್ದಕ್ಕಾಗಿ ದಕ್ಷಿಣದ ಹೆಸರಾಂತ ತಾರೆ ತಮನ್ನಾ ಭಾಟಿಯಾಗೆ ಮುಂಬೈ ಸೈಬರ್ ಪೊಲೀಸ್ ಸಮನ್ಸ್ ಜಾರಿ ಮಾಡಿದ್ದಾರೆ.
ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
2023ರಲ್ಲಿ ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದ್ದು, ವಯಾಕಾಮ್ ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ ಪ್ರಕರಣ ಇದಾಗಿದೆ.