ಇಸ್ಲಾಮಾಬಾದ್: ಉಗ್ರರನ್ನು ಗುರಿಯಾಗಿರಿಸಿ ಪರಸ್ಪರ ನಡೆಸಿದ ಪರಸ್ಪರ ದಾಳಿಯಿಂದ ನಿರ್ಮಾಣವಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕೊನೆಗಾಣಿಸಲು ಪಾಕಿಸ್ತಾನ ಮತ್ತು ಇರಾನ್ ಒಪ್ಪಿವೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಉಭಯ ದೇಶಗಳ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ನಿಗ್ರಹ, ಪರಸ್ಪರ ಸಹಕಾರ ಮತ್ತು ಸಮನ್ವಯವನ್ನು ಬಲಪಡಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿದೆ.
ಪಾಕಿಸ್ತಾನದ ಜೈಶ್ ಅಲ್ ಅದ್ಲ್ ಉಗ್ರಗಾಮಿ ಸಂಘಟನೆಯ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದ್ದ ಪಾಕ್, ಆ ದೇಶದ ರಾಯಭಾರಿಯನ್ನು ವಜಾಗೊಳಿಸಿತ್ತು. ಅಲ್ಲದೆ, ಪ್ರತಿ ದಾಳಿಯನ್ನೂ ನಡೆಸಿತ್ತು.