ಕಾಶ್ಮೀರ: ವಿದೇಶಗಳೊಂದಿಗೆ ಭಾರತವು ತನ್ನ ಉದ್ಯಮ ಸಂಬಂಧ ಮುಂದುವರಿಸಲು ಅಫಘಾನಿಸ್ತಾನದ ತಾಲಿಬಾನಿಗರ ಜೊತೆಗೆ ಮಾತುಕತೆ ನಡೆಸಬೇಕು ಎಂದು ಶನಿವಾರ ದೆಹಲಿಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದರು.
ಅಫಘಾನಿಸ್ತಾನದಲ್ಲಿ ಭಾರತವು ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ತಾಲಿಬಾನ್ ಹತ್ತಿರ ಮಾತನಾಡುವುದರಿಂದ ಮಾತ್ರ ಅದನ್ನು ಉಳಿಸಿಕೊಳ್ಳಬಹುದು. ಬಂಡವಾಳ, ಉದ್ಯಮ ವೃದ್ಧಿ ಜೊತೆಗೆ ಕಾಶ್ಮೀರದ ವಿಷಯದಲ್ಲೂ ಮಾತುಕತೆಯಿಂದ ಮಾತ್ರ ಸಹಕಾರ ಪಡೆಯುವುದು ಸಾಧ್ಯ. ಮೋದಿ ಸರಕಾರ ತಾಲಿಬಾನಿಗರ ಜೊತೆ ಮಾತನಾಡಲಿ ಎಂದು ಜಮ್ಮು ಕಾಶ್ಮೀರದ ಮಾಜೀ ಮುಖ್ಯಮಂತ್ರಿ ಸಹ ಆಗಿದ್ದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.