Home ಟಾಪ್ ಸುದ್ದಿಗಳು ಭಾರತದಲ್ಲಿ ಬೌದ್ಧ ಸ್ಥಳಗಳ ನಾಶದ ಹೇರಳ ಐತಿಹಾಸಿಕ ಪುರಾವೆಗಳ ಬಗ್ಗೆ ತಿಳಿಯದಿರುವುದು ಆಶ್ಚರ್ಯಕರ: ಆಭಾಸ್ ಮಾಲ್ದಾಹಿಯಾರ್...

ಭಾರತದಲ್ಲಿ ಬೌದ್ಧ ಸ್ಥಳಗಳ ನಾಶದ ಹೇರಳ ಐತಿಹಾಸಿಕ ಪುರಾವೆಗಳ ಬಗ್ಗೆ ತಿಳಿಯದಿರುವುದು ಆಶ್ಚರ್ಯಕರ: ಆಭಾಸ್ ಮಾಲ್ದಾಹಿಯಾರ್ ವಿರುದ್ಧ ತೇನ್ಸಿಂಗ್ ತಿರುಗೇಟು

ನವದೆಹಲಿ: ಭಾರತದಲ್ಲಿ ಬೌದ್ಧ ಸ್ಥಳಗಳ ನಾಶದ ಹೇರಳವಾದ ಐತಿಹಾಸಿಕ ಪುರಾವೆಗಳ ಬಗ್ಗೆ ನಿಮಗೆ ತಿಳಯದಿರುವುದು ಆಶ್ಚರ್ಯಕರವಾಗಿದೆ ಎಂದು ದಿ ಬೂತನಿಸ್ ಪತ್ರಿಕೆಯ ಸಂಪಾದಕ ತೇನ್ಸಿಂಗ್ ಲಮ್ಸಾಂಗ್ ಎಂಬವರು ಅಂಕಣಕಾರ ಆಭಾಸ್ ಮಾಲ್ದಾಹಿಯಾರ್’ಗೆ ತಿರುಗೇಟು ನೀಡಿದ್ದಾರೆ.

ಬೌದ್ಧ ಮಂದಿರಗಳ ನಾಶದ ಕುರಿತು ಅಭಾಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ಹಾಯ್ ಆಭಾಸ್ ನಾನು ಕೆಲವು ದಿನಗಳಿಂದ ಟ್ವಿಟರ್ನಿಂದ ಹೊರಗುಳಿದಿದ್ದರಿಂದ ಇಂದು ನಿಮ್ಮ ಟ್ವೀಟ್ ಅನ್ನು ನೋಡಿದೆ. ಭಾರತದಲ್ಲಿ ಬೌದ್ಧ ಸ್ಥಳಗಳ ನಾಶದ ಹೇರಳವಾದ ಐತಿಹಾಸಿಕ ಪುರಾವೆಗಳ ಬಗ್ಗೆ ನಿಮಗೆ ತಿಳಿದಿಲ್ಲದಿರುವುದು ಆಶ್ಚರ್ಯಕರವಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಇತಿಹಾಸಕಾರರು, ಅವರ ಕೃತಿಗಳು ಮತ್ತು ಸುದ್ದಿ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಅಂಕಣಕಾರ ಅಭಾಸ್ ಮಾಲ್ದಾಹಿಯಾರ್ ಅವರು ತೇನ್ಸಿಂಗ್ ಲಮ್ಸಾಂಗ್ ಅವರನ್ನು ಉದ್ದೇಶಿಸಿ, ‘ ಆತ್ಮೀಯ ತೇನ್ಸಿಂಗ್ ಲಮ್ಸಾಂಗ್ ಅವರೆ, ಹಿಂದೂಗಳು ನಾಶಪಡಿಸಿದ ಬೌದ್ಧ ಸ್ಥಳಗಳ ಪ್ರಾಥಮಿಕ ಪಟ್ಟಿಯನ್ನು ನಮಗೆ ನೀಡಿ. ಭಾರತದಿಂದ ನಿಮಗೆ ಇದು ಮುಕ್ತ ಸವಾಲಾಗಿದೆ. ಪತ್ರಕರ್ತರಾಗಿರುವ ನೀವು ಪ್ರಾಥಮಿಕ ಮೂಲ ಎಂದರೆ ಏನೆಂದು ಅರ್ಥಮಾಡಿಕೊಂಡಿದ್ದೀರಿ ಎಂದು ನಮಗೆ ಖಾತ್ರಿಯಿದೆ ಎಂದು ಟ್ವೀಟ್ ಮೂಲಕ ಅವರಿಗೆ ಸವಾಲೆಸೆದಿದ್ದರು.

ಈ ನಿಟ್ಟಿನಲ್ಲಿ ತೇನ್ಸಿಂಗ್ ಲಮ್ಸಾಂಗ್ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿ ಅಭಾಸ್ ಮಾಲ್ದಾಹಿಯಾರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

Join Whatsapp
Exit mobile version