5 ಕಿಲೋ ಚಿನ್ನಾಭರಣ ಧರಿಸಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ !

Prasthutha|

ರಾಜಕೀಯ ನಾಯಕರು ವ್ಯಾಯಾಮ ಮಾಡುವುದರಿಂದ ಹಿಡಿದು ಗಾಲಿಕುರ್ಚಿಯಲ್ಲಿ ಪ್ರಚಾರ ಮಾಡುವ ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ಹಲವು ಅಸಾಮಾನ್ಯ ದೃಶ್ಯಗಳು ಕಂಡುಬರುತ್ತಿದೆ.  ಇಂತಹ ಅಸಾಮಾನ್ಯ ದೃಶ್ಯಗಳ ಪಟ್ಟಿಗೆ ,ತಮಿಳುನಾಡಿನ ಸ್ವತಂತ್ರ ಅಭ್ಯರ್ಥಿ ಮಂಗಳವಾರ ಭಾರೀ ಗಾತ್ರದ ಚಿನ್ನಾಭರಣ ದರಿಸಿ ನಾಮಪತ್ರ ಸಲ್ಲಿಸಲು ಬಂದದ್ದು ಸೇರಿಕೊಂಡಿದೆ.

ತಿರುನಲ್ವೇಲಿ ಜಿಲ್ಲೆಯ ಆಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸ್ವತಂತ್ರ ಅಭ್ಯರ್ಥಿ ಹರಿ ನಾಡರ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು,  5 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಸ್ಥಳೀಯ ಚುನಾವಣಾ ಕಚೇರಿಗೆ ಪ್ರವೇಶಿಸಿದ್ದು ಈಗ ಸಾಮಾಜಿಕ ವಲಯಗಳಲ್ಲಿ ಸುದ್ಧಿಯಾಗಿದೆ.

- Advertisement -

ಪನಂಗಟ್ಟು ಪಡೈ ಕಚ್ಚಿ ಸಂಯೋಜಕರಾಗಿರುವ ಹರಿ ನಾಡರ್ ನಾಮಪತ್ರದಲ್ಲಿ  ತಾನು 11.2 ಕೆಜಿ ಚಿನ್ನವನ್ನು ಹೊಂದಿದ್ದಾರೆಂದು ದಾಖಲಿಸಿದ್ದಾರೆ. ಹರಿ ನಾಡರ್ ಅವರ ಚಿನ್ನದ ಪ್ರದರ್ಶನಕ್ಕೆ ಮುಂಚಿತವಾಗಿ ಅಭ್ಯರ್ಥಿಯೊಬ್ಬರು ಪೂರ್ಣ ಪಿಪಿಇ ಕಿಟ್ ಧರಿಸಿ ಚೆನ್ನೈನಲ್ಲಿ ನಾಮಪತ್ರ ಸಲ್ಲಿಸಿದ್ದರು ಎನ್ನಲಾಗಿದೆ.

- Advertisement -