Home ಕರಾವಳಿ ಅಕ್ರಮ ಟೋಲ್ ಗೇಟ್ ತೆಗೆಸುವ ಬಗ್ಗೆ ಚರ್ಚೆ: ಮೇಯರ್ ಪ್ರೇಮಾನಂದ

ಅಕ್ರಮ ಟೋಲ್ ಗೇಟ್ ತೆಗೆಸುವ ಬಗ್ಗೆ ಚರ್ಚೆ: ಮೇಯರ್ ಪ್ರೇಮಾನಂದ

ಮಂಗಳೂರು: ರಾಜ್ಯದ ಎಲ್ಲ ಹೆದ್ದಾರಿಗಳನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುತ್ತಿದ್ದು ಎಲ್ಲ ಹೆದ್ದಾರಿಗಳ ಕಾಮಗಾರಿ ಪ್ರಗತಿಯಲ್ಲಿದೆ, ಕೆಲವು ಮುಗಿದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿದ್ದು ಕೊರ್ಡೆಲ್ ಹಾಲ್ನಲ್ಲಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ. ಈ ಸುತ್ತಿನಲ್ಲಿ 485 ಕಿಮೀ ಹೆದ್ದಾರಿ ಚತುಷ್ಪಥ ರಸ್ತೆಯಾಗಲಿದೆ. ಏಳು ಸೇತುವೆಗಳು ನಿರ್ಮಾಣವಾಗಲಿದ್ದು, ಈ ಪೈಕಿ ನಾಲ್ಕು ಸೇತುವೆಗಳ ಕಾಮಗಾರಿ ಮುಗಿದಿವೆ. ಕೇಂದ್ರ ಸಚಿವರು ಇದನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಂಬಂಧ 1,890 ಕೋಟಿ ರೂಪಾಯಿಗೂ ಹೆಚ್ಚು ಕೇಂದ್ರದಿಂದ ಹರಿದು ಬಂದಿದೆ ಎಂದೂ ಅವರು ಹೇಳಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಸಹ ಈ ಬಗ್ಗೆ ಮಾತನಾಡಿದರು. ಹೆಚ್ಚುವರಿ ಟೋಲ್ ಗೇಟ್ ತೆಗೆಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು.

Join Whatsapp
Exit mobile version