ಸೆ. 11 ರಂದು ತಾಲಿಬಾನ್ ನೂತನ ಸರ್ಕಾರದ ಪ್ರಮಾಣವಚನ : ಭಾರತಕ್ಕೂ ಆಹ್ವಾನ

Prasthutha|

ಕಾಬೂಲ್: ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ಸ್ (ಐಇಎ) ನ ಹಂಗಾಮಿ ಸರ್ಕಾರವು ಸೆಪ್ಟೆಂಬರ್ 11 ರಂದು ಪ್ರಮಾಣವಚನ ಸ್ವೀಕರಿಸಲಿದೆ ಎಂದು ತಾಲಿಬಾನ್ ಮೂಲಗಳು ಸ್ಪಷ್ಟಪಡಿಸಿವೆ. 2001ರ ಸೆಪ್ಟೆಂಬರ್ 11 ರಂದು ಅಮೆರಿಕದ ಅವಳಿ ಕಟ್ಟಡವನ್ನು ಷಡ್ಯಂತ್ರದ ಮೂಲಕ ಉರುಳಿಸಿದ ದಿನದಂದೇ ತಾಲಿಬಾನ್ ಸರ್ಕಾರ ಅಧಿಕೃತವಾಗಿ ರಚನೆಯಾಗುತ್ತಿರುವುದು ವಿಶೇಷ.

- Advertisement -

ಹೊಸದಾಗಿ ರಚನೆಯಾದ ತಾಲಿಬಾನ್ ಸರ್ಕಾರ ಚೀನಾ, ಟರ್ಕಿ, ಪಾಕಿಸ್ತಾನ, ಇರಾನ್, ಕತಾರ್, ಭಾರತ ಮತ್ತು ಅಮೆರಿಕ ಸೇರಿದಂತೆ ವಿವಿಧ ದೇಶಗಳನ್ನು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ.

ಚೀನಾ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ನಾವು ಉತ್ತಮ ಸಂಬಂಧವನ್ನು ಬಯಸುತ್ತೇವೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದರು.

- Advertisement -

ಯುದ್ಧಪೀಡಿತ ಅಫ್ಘಾನಿ ನಲ್ಲಿ ಸದ್ಯ ಶಾಂತಿ ನೆಲೆಸಿದೆ. ಪ್ರಸಕ್ತ ದೇಶ ಬಿಕ್ಕಟ್ಟಿನಿಂದ ಹೊರಬರುತ್ತಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ಜನತೆ ನಮ್ಮನ್ನು ಬೆಂಬಲಿಸಬೇಕು. ಅಂತಾರಾಷ್ಟ್ರೀಯ ಸಮುದಾಯ ತಮ್ಮ ರಾಯಭಾರಿ ಕಚೇರಿಯನ್ನು ಕಾಬೂಲ್ ನಲ್ಲಿ ತೆರೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಅವರು ತಿಳಿಸಿದರು.

Join Whatsapp