ನೀರು ಸರಬರಾಜು ಆರಂಭಿಸುವಂತೆ ಒತ್ತಾಯಿಸಿ ತಲಪಾಡಿ ಗ್ರಾ.ಪಂ ಗೆ ಮುತ್ತಿಗೆ

Prasthutha|

ತಲಪಾಡಿ: ತಲಪಾಡಿ ಗ್ರಾಮದ 1,2,3,4 ನೇ ವಾರ್ಡಿಗೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಾಗರೀಕ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ಇಂದು ತಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

- Advertisement -

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಗ್ರಾಮ ಸಮಿತಿ ಅಧ್ಯಕ್ಷರಾದ ಇಮ್ರಾನ್ ಪೂಮಣ್ಣು ಮುತ್ತಿಗೆಯ ನೇತೃತ್ವ ವಹಿಸಿದ್ದರು. ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ  ಸಿದ್ದೀಕ್ ತಲಪಾಡಿ ಮತ್ತು ಎಸ್.ಡಿ.ಪಿ.ಐ ನ ಹಕೀಮ್ ಕೆಸಿ ನಗರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಒಂದು ವಾರದ ಹಿಂದೆ ಪಂಚಾಯತ್  ಅಧ್ಯಕ್ಷರು ಮತ್ತು ಪಿಡಿಒ ಅವರಿಗೆ ಗಡುವು ನಿಗದಿಪಡಿಸಿ ಮನವಿ ಸಲ್ಲಿಸಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಇಂದು ಮುತ್ತಿಗೆ ಹಾಕಲಾಯಿತು.

- Advertisement -

ಪ್ರತಿಭಟನಾಕಾರರ ಜೊತೆ ಮಾತನಾಡಿದ ಪಂಚಾಯತ್ ಅಧಿಕಾರಿಗಳು ಇಂದಿನಿಂದಲೇ ನೀರು ಸರಬರಾಜು ಆರಂಭಿಸುವ ಬಗ್ಗೆ ಸ್ಪಷ್ಟನೆ ಕೊಟ್ಟ ಹಿನ್ನೆಲೆಯಲ್ಲಿ ಮುತ್ತಿಗೆ ಕೈ ಬಿಡಲಾಯಿತು.

ಮುತ್ತಿಗೆ ಕಾರ್ಯಕ್ರಮದಲ್ಲಿ SDPI ಗ್ರಾಮ ಸಮಿತಿಯ ಕಾರ್ಯದರ್ಶಿ ರಶೀದ್ ಇಂಜಿನಿಯರ್, ಮುಖಂಡರಾದ ಮೊಯ್ದಿನ್ ಉಚ್ಚಿಲ್,  ಹಾರೂನ್, ಅಂದು, ಬಶೀರ್ , ಅಬ್ದುಲ್ಲಾ, ಸಿನಾನ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp