Home ಟಾಪ್ ಸುದ್ದಿಗಳು ಇಂದಿನಿಂದ ಮೈಸೂರು- ಬೆಂಗಳೂರು, ಕೇರಳ- ಕರ್ನಾಟಕ ಗಡಿಯ ತಲಪಾಡಿ, ಬ್ರಹ್ಮರಕೂಟ್ಲು ಟೋಲ್‌ಗಳ ಶುಲ್ಕ ಹೆಚ್ಚಳ

ಇಂದಿನಿಂದ ಮೈಸೂರು- ಬೆಂಗಳೂರು, ಕೇರಳ- ಕರ್ನಾಟಕ ಗಡಿಯ ತಲಪಾಡಿ, ಬ್ರಹ್ಮರಕೂಟ್ಲು ಟೋಲ್‌ಗಳ ಶುಲ್ಕ ಹೆಚ್ಚಳ

ಬೆಂಗಳೂರು: ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದ್ದು, ಇಂದಿನಿಂದ (ಏಪ್ರಿಲ್ 1) ಮೈಸೂರು – ಬೆಂಗಳೂರು, ಕೇರಳ- ಕರ್ನಾಟಕ ಗಡಿಯ ತಲಪಾಡಿ, ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಮತ್ತು ಕೆಲವು ಟೋಲ್ ಗಳ ಶುಲ್ಕ ಹೆಚ್ಚಳವಾಗಲಿದೆ.

ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ.

2023ರ ಜೂನ್‌ನಲ್ಲಿ ಲ್ಲಿಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.

ಕಾರು ಏಕಮುಖ ಸಂಚಾರ 170, ದ್ವಿಮುಖ ಸಂಚಾರ 255, ಲಘು ವಾಣಿಜ್ಯ ವಾಹನ ಏಕಮುಖ 270, ದ್ವಿಮುಖ ಸಂಚಾರ 415, ಟ್ರಕ್ ಬಸ್ ಏಕಮುಖ 580, ದ್ವಿಮುಖ 870 , ಮೂರು ಆಕ್ಸೆಲ್ ವಾಣಿಜ್ಯ ವಾಹನ 635 , ದ್ವಿಮುಖ 950, ದೊಡ್ಡ ಗಾತ್ರದ ವಾಹನ 1080 ರಿಂದ 1620, 4 ಅಥವಾ ಆರು ಆಕ್ಸೆಲ್ ನ ವಾಹನ ಏಕಮುಖ 1110, ದ್ವಿಮುಖ 1660 . ಆಗಿದೆ.

ಕರಾವಳಿಯಲ್ಲಿರುವ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಕೇರಳ- ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಗಳಲ್ಲಿ ಪರಿಷ್ಕ್ರತ ಶುಲ್ಕ ಜಾರಿಗೆ ಬರಲಿದೆ.

ಬ್ರಹ್ಮರಕೂಟ್ಲು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರದ ಶುಲ್ಕದಲ್ಲಿ 5 ರೂ. ಏರಿಕೆ ಕಂಡಿದ್ದು ಪರಿಷ್ಕ್ರತ ದರ 50 ರೂ. ಆಗಿರಲಿದೆ. ತಲಪಾಡಿಯಲ್ಲಿ 80 ರೂ, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿ 90 ರೂ. ಪರಿಷ್ಕ್ರತ ದರವಾಗಿದೆ.

ಹಾಗೂ ಮುಂಬೈನ ರಾಜೀವ್ ಗಾಂಧಿ ಬಾಂದ್ರಾ ವರ್ಲಿ ಸೀ ಲಿಂಕ್ ನಲ್ಲಿ ಏಕಮುಖ ಪ್ರಯಾಣವು ಏಪ್ರಿಲ್ 1 ರಿಂದ ಹೆಚ್ಚು ದುಬಾರಿಯಾಗಲಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್ಡಿಸಿ) ಸೇತುವೆಯ ಟೋಲ್ ಹೆಚ್ಚಳವನ್ನು ಘೋಷಿಸಿದ್ದು, ಇದು ಶೇಕಡಾ 18 ರಷ್ಟು ದುಬಾರಿಯಾಗಿದೆ.

Join Whatsapp
Exit mobile version