Home ಟಾಪ್ ಸುದ್ದಿಗಳು ಕಾನೂನು ಕೈಗೆತ್ತಿಕೊಳ್ಳುವುದು ಖಂಡನೀಯ: ಉದಯಪುರ ಟೈಲರ್ ಹತ್ಯೆಗೆ ಎಐಎಂಪಿಎಲ್ ಬಿ ಖಂಡನೆ

ಕಾನೂನು ಕೈಗೆತ್ತಿಕೊಳ್ಳುವುದು ಖಂಡನೀಯ: ಉದಯಪುರ ಟೈಲರ್ ಹತ್ಯೆಗೆ ಎಐಎಂಪಿಎಲ್ ಬಿ ಖಂಡನೆ

ಲಕ್ನೋ: ಉದಯಪುರದಲ್ಲಿ ಟೈಲರ್ ಕೊಲೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಖಂಡಿಸಿದ್ದು, “ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅತ್ಯಂತ ಖಂಡನೀಯ, ವಿಷಾದನೀಯ  ಎಂದು ಹೇಳಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಎಐಎಂಪಿಎಲ್ ಬಿ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ, “ಯಾವುದೇ ಧಾರ್ಮಿಕ ವ್ಯಕ್ತಿಯನ್ನು ದೂಷಿಸುವುದು ಮತ್ತು ಅಪಪ್ರಚಾರ ಮಾಡುವುದು ಗಂಭೀರ ಅಪರಾಧವಾಗಿದೆ. (ಮಾಜಿ) ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಆಡಿದ ಅವಹೇಳನಕಾರಿ ಮಾತುಗಳು ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವುಂಟುಮಾಡಿವೆ. ಈ ಅಪರಾಧದ ವಿರುದ್ಧ ಸರ್ಕಾರದ ನೀತಿಯು ನಮ್ಮ ಗಾಯಗಳ ಮೇಲೆ ಉಪ್ಪನ್ನು ಸುರಿದಿವೆಯೇ ಹೊರತುಬೇರೇನೂ ಅಲ್ಲ. ಆದರೆ ಇದರ ಹೊರತಾಗಿಯೂ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಮತ್ತು ಯಾರನ್ನಾದರೂ ಅಪರಾಧಿ ಎಂದು ಘೋಷಿಸಲು ಮತ್ತು ನಂತರ ಅವರನ್ನು ಕೊಲ್ಲಲು ಯಾರಿಗೂ ಅವಕಾಶ ಇಲ್ಲ, ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ” ಎಂದು ಅವರು ಹೇಳಿದರು.

“ಕಾನೂನು ಅಥವಾ ಇಸ್ಲಾಮಿಕ್ ಕಾನೂನು ಇದಕ್ಕೆ ಅವಕಾಶ ನೀಡುವುದಿಲ್ಲ. ಉದಯಪುರದಲ್ಲಿ ನಡೆದ ಬರ್ಬರ ಹತ್ಯೆ ಘಟನೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version