Home ಕರಾವಳಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ; ಕಾರ್ಯಕರ್ತರಿಗೆ ಕರೆ ನೀಡಿದ ಅಭ್ಯರ್ಥಿ ಇಲ್ಯಾಸ್ ತುಂಬೆ

ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ; ಕಾರ್ಯಕರ್ತರಿಗೆ ಕರೆ ನೀಡಿದ ಅಭ್ಯರ್ಥಿ ಇಲ್ಯಾಸ್ ತುಂಬೆ

ಬಂಟ್ವಾಳ: ಮುಂಬರುವ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಬಂಟ್ವಾಳ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ತುಂಬೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇವೆ. ಈಗಾಗಲೇ ನಮ್ಮ ಎಸ್‌ಡಿಪಿಐ ಕಾರ್ಯಕರ್ತರು ಕ್ಷೇತ್ರದಾದ್ಯಂತ ಮೇರು ಉತ್ಸಾಹದಿಂದ ಪೂರ್ವ ತಯಾರಿಯ ಚುರುಕಿನ ಪ್ರಚಾರ ಕಾರ್ಯಗಳನ್ನು ಯಶಸ್ವಿಗೊಳಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

ಇನ್ನೀಗ ತಳಮಟ್ಟದ ಪ್ರಚಾರದ ಸಮಯ. ಪ್ರತಿಯೊಬ್ಬ ಮತದಾರರ ಬಳಿ ಮತ ಯಾಚನೆಯ ಕಾರ್ಯವನ್ನು ತೀವ್ರಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲಾ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಯೊಂದು ನಿಮಿಷವನ್ನು ಸದುಪಯೋಗಪಡಿಸಿಕೊಂಡು ಮನೆಮನೆ ಬಾಗಿಲಿಗೆ ತೆರಳಿ ಪಕ್ಷದ ಪ್ರಚಾರವನ್ನು ಮಾಡಬೇಕಾಗಿ ಅತ್ಯಂತ ವಿನಯ ಪೂರ್ವಕವಾಗಿ ಕೋರುತ್ತಿದ್ದೇನೆ ಎಂದು ಇಲ್ಯಾಸ್ ತುಂಬೆ ಹೇಳಿದ್ದಾರೆ.

Join Whatsapp
Exit mobile version