ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೆರಗು ನೀಡಲಿವೆ ಸ್ತಬ್ಧ ಚಿತ್ರಗಳು: ಯಾವ್ಯಾವ ಜಿಲ್ಲೆಯಿಂದ ಏನೇನು?

Prasthutha|

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಡೆಯಲಿದೆ. ಮೈಸೂರು ದಸರಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ 18 ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 49 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

- Advertisement -


ದಸರಾ ಜಂಬೂ ಸವಾರಿಯ ಸ್ತಬ್ದಚಿತ್ರಗಳ ವಿವರ:
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಸ್ತಬ್ದ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ 18 ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 49 ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.
1.ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಶ್ರೀ ಬನಶಂಕರಿ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

 1. ಬಳ್ಳಾರಿ ಜಿಲ್ಲೆಯಿಂದ ಕುಮಾರಸ್ವಾಮಿ ದೇವಸ್ಥಾನ ಪಾರ್ವತಿ ದೇವಿ ದೇವಾಲಯ, ಕಸೂತಿ, ನಾರಿಹಳ್ಳ ಅಣೆಕಟ್ಟು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 2. ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 3. ಬೆಂಗಳೂರು ಗ್ರಾಮಾಂತರದಿಂದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ನೆಲಮಂಗಲ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 4. ಬೆಂಗಳೂರು ನಗರದಿಂದ ಚಂದ್ರಯಾನ 3ರ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 5. ಬೀದರ್ ಜಿಲ್ಲೆಯಿಂದ ಕೃಷ್ಣಮೃಗ ಸಂರಕ್ಷಣಾ ಧಾಮದ ಅರಣ್ಯ ಪ್ರದೇಶದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 6. ಚಾಮರಾಜನಗರ ಜಿಲ್ಲೆಯಿಂದ ಜಾನಪದ, ಭಕ್ತಿಯ ಬಿಡು ಹುಲಿ, ಆನೆಗಳ ಸಂತೃಪ್ತಿಯ ಕಾಡು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 7. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಕತೆಯಲ್ಲಿ ಅನೇಕತೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 8. ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟದಿಂದ ಬಟ್ಟಲಿಗೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 9. ಚಿತ್ರದುರ್ಗ ಜಿಲ್ಲೆಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 10. ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಕುಲ ಗುತ್ತಿನ ಮನೆ – ವಿವೇಕಾನಂದ ತಾರಾಲಯ- ಬೀಚ್ ಸರ್ಫಿಂಗ್ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
 11. ದಾವಣಗೆರೆ ಜಿಲ್ಲೆಯಿಂದ ಸಂತ ಸೇವಾವಾಲಾ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 12. ಧಾರವಾಡ ಜಿಲ್ಲೆಯಿಂದ ಧಾರವಾಡ ಪೇಡ ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 13. ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 14. ಹಾಸನ ಜಿಲ್ಲೆಯಿಂದ ಹಾಸನಾಂಬ ದೇವಾಲಯ, ಹಲ್ಮಿಡಿ -ಈಶ್ವರ ದೇವಸ್ಥಾನ ಸಿದ್ದೇಶ್ವರ ದೇವಾಲಯದ ಸ್ತಬ್ಧಚಿತ್ರ ನಿರ್ಮಾಣವಾಗಿದೆ.
 15. ಹಾವೇರಿ ಜಿಲ್ಲೆಯಿಂದ ಶಂಕನಾದ ಮುಳುಗುತ್ತಿರುವ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
 16. ಕಲ್ಬುರ್ಗಿ ಜಿಲ್ಲೆಯಿಂದ ರಾಜವಂಶಸ್ತ್ರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
 17. ಕೊಡಗು ಜಿಲ್ಲೆಯಿಂದ ಕೊಡಗಿನ ಪ್ರೇಕ್ಷಣೀಯ ಸ್ಥಳಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 18. ಕೋಲಾರ ಜಿಲ್ಲೆಯಿಂದ ನರೇಗಾ ಯೋಜನೆ ಅಡಿ ವೀರಗಲ್ಲುಗಳ ಉತ್ಕನನ ಹಾಗೂ ಮರುಸ್ಥಾಪನೆಯ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
 19. ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ ಹಾಗೂ ಕೈಮಗ್ಗ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
 20. ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಿಕ ಉದ್ಯಮ ಆಲೆಮನೆ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 21. ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 22. ರಾಯಚೂರು ಜಿಲ್ಲೆಯಿಂದ ನವರಂಗ ದರ್ವಾಜ ಹಾಗೂ ಆರ್ಟಿಫಿಎಸ್ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 23. ರಾಮನಗರ ಜಿಲ್ಲೆಯಿಂದ ಚನ್ನಪಟ್ಟಣದ ಚಂದದ ಗೊಂಬೆಗಳು ಹಾಗೂ ಇತ್ಯಾದಿ ಕಲೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 24. ಶಿವಮೊಗ್ಗ ಜಿಲ್ಲೆಯಿಂದ ಕುವೆಂಪುರವರ ಪ್ರತಿಮೆ, ಕುಪ್ಪಳ್ಳಿ,ಗುಡವಿ ಪಕ್ಷಿಧಾಮ, ನಗರ ಸಿಂಹದಾಮ, ಶಿವಪ್ಪ ನಾಯಕ ಪ್ರತಿಮೆಯ ಸ್ತಬ್ಧಚಿತ್ರ ನಿರ್ಮಾಣವಾಗಿದೆ.
 25. ತುಮಕೂರು ಜಿಲ್ಲೆಯಿಂದ ಮೂಡಲಪಾಯ ಯಕ್ಷಗಾನ, ತವರು ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 26. ಉಡುಪಿ ಜಿಲ್ಲೆಯಿಂದ ತ್ಯಾಜ್ಯ ಮುಕ್ತ ಮತ್ಸ್ಯ ಸ್ನೇಹಿ ಸಮುದ್ರ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 27. ಉತ್ತರ ಕನ್ನಡ ಜಿಲ್ಲೆಯಿಂದ ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಿಂಗಳಿಕ ಸಂರಕ್ಷಣೆ ಕುರಿತ ತಬ್ದ ಚಿತ್ರ ನಿರ್ಮಾಣಗೊಂಡಿದೆ.
 28. ವಿಜಯಪುರ ಜಿಲ್ಲೆಯಿಂದ ಜ್ಞಾನ ಯೋಗಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 29. ವಿಜಯನಗರ ಜಿಲ್ಲೆಯಿಂದ ವಿಠಲ ದೇವಸ್ಥಾನದ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
  31, ಯಾದಗಿರಿ ಜಿಲ್ಲೆಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.