Home ಕ್ರೀಡೆ T20 ವಿಶ್ವಕಪ್ ಸೆಮಿಫೈನಲ್ : ಇಂಗ್ಲೆಂಡ್ ಗೆಲುವಿಗೆ 169 ರನ್ ಗುರಿ ನೀಡಿದ ಭಾರತ

T20 ವಿಶ್ವಕಪ್ ಸೆಮಿಫೈನಲ್ : ಇಂಗ್ಲೆಂಡ್ ಗೆಲುವಿಗೆ 169 ರನ್ ಗುರಿ ನೀಡಿದ ಭಾರತ

ಅಡಿಲೇಡ್‌: ಟಿ20 ವಿಶ್ವಕಪ್‌ ಟೂರ್ನಿಯ ದ್ವಿತೀಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ ಟೀಮ್‌ ಇಂಡಿಯಾ, 169 ರನ್‌ಗಳ ಗುರಿಯನ್ನು ಮುಂದಿಟ್ಟಿದೆ. ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಗಳಿಸಿದ ಅರ್ಧಶತಕಗಳ ಬಲದಲ್ಲಿ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 168 ರನ್‌ಗಳಿಸಿದೆ. 

15 ಓವರ್‌ಗಳ ಅಂತ್ಯದವರೆಗೂ ಭಾರತದ ಬ್ಯಾಟಿಂಗ್‌ ನಿಧಾನಗತಿಯಲ್ಲಿ ಸಾಗಿತ್ತು. 3 ವಿಕೆಟ್‌ ನಷ್ಟದಲ್ಲಿ 100 ರನ್‌ಗಳಿಸಿದ್ದ ತಂಡಕ್ಕೆ ಆ ಬಳಿಕ ಪಾಂಡ್ಯಾ, ಬಿರುಸಿನ ಹೊಡೆತಗಳ ಮೂಲಕ ಬಲ ತುಂಬಿದರು. 33 ಎಸೆತಗಳನ್ನು ಎದುರಿಸಿದ ಹಾರ್ದಿಕ್‌, 5 ಸಿಕ್ಸರ್‌ ಮತ್ತು 4 ಬೌಂಡರಿಗಳ ಮೂಲಕ 63 ರನ್‌ಗಳಿಸಿ ಇನಿಂಗ್ಸ್‌ನ ಅಂತಿಮ ಎಸೆತದಲ್ಲಿ ಹಿಟ್‌ ವಿಕೆಟ್‌ ಆದರು. ವಿರಾಟ್‌ ಕೊಹ್ಲಿ 50 ರನ್‌ (40 ಎಸೆತ, 4×4, 6×1), ರೋಹಿತ್‌ ಶರ್ಮಾ 27 ರನ್‌ಗಳಿಸಿ ನಿರ್ಗಮಿಸಿದರು. ‌

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌, ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟಿತ್ತು. ಮಹತ್ವದ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಟೀಮ್‌ ಇಂಡಿಯಾದ ಆರಂಭಿಕರು ವಿಫಲರಾದರು. ರಾಹುಲ್‌ 5 ರನ್‌ಗಳಿಸಿ ವೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. 28 ಎಸೆತಗಳಲ್ಲಿ 27 ರನ್‌ಗಳಿಸಿದ ಶರ್ಮಾ. ಜೋರ್ಡನ್‌ ಬೌಲಿಂಗ್‌ನಲ್ಲಿ ಕರ್ರನ್‌ಗೆ ಕ್ಯಾಚಿತ್ತರು. ದಿನೇಶ್‌ ಕಾರ್ತಿಕ್‌ ಬದಲು ಸ್ಥಾನ ಪಡೆದ ರಿಷಭ್‌ ಪಂತ್‌ ಕೊಡುಗೆ 6 ರನ್‌. 

ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಕ್ರಿಸ್‌ ಜೋರ್ಡಾನ್‌ 3, ಆದಿಲ್‌ ರಶೀದ್‌ ರಶೀದ್‌ ಮತ್ತು ಕ್ರಿಸ್‌ ವೋಕ್ಸ್‌ ತಲಾ 1 ವಿಕೆಟ್‌ ಪಡೆದರು.

Join Whatsapp
Exit mobile version