Home ಟಾಪ್ ಸುದ್ದಿಗಳು T20 ವಿಶ್ವಕಪ್ | ನ್ಯೂಜಿಲೆಂಡ್ – ಪಾಕಿಸ್ತಾನ ಸೆಮಿಫೈನಲ್ ಮುಖಾಮುಖಿ, ದಾಖಲೆಯ ಪುಟಗಳಲ್ಲಿ ಪಾಕ್ ಅಜೇಯ

T20 ವಿಶ್ವಕಪ್ | ನ್ಯೂಜಿಲೆಂಡ್ – ಪಾಕಿಸ್ತಾನ ಸೆಮಿಫೈನಲ್ ಮುಖಾಮುಖಿ, ದಾಖಲೆಯ ಪುಟಗಳಲ್ಲಿ ಪಾಕ್ ಅಜೇಯ

ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹೋರಾಟಗಳು ಇಂದಿನಿಂದ (ನ.9) ಆರಂಭವಾಗಲಿದೆ. ಫೈನಲ್ ಗುರಿಯಾಗಿಸಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ನಿರ್ಣಾಯಕ ಸವಾಲಿಗೆ ಸಜ್ಜಾಗಿವೆ. ಸೂಪರ್ 12 ಹಂತದಲ್ಲಿ ನ್ಯೂಜಿಲೆಂಡ್, ಯಾವುದೇ ಒತ್ತಡ ಎದುರಿಸದೇ ಗ್ರೂಪ್ 1ರ ಅಗ್ರಸ್ಥಾನಿಯಾಗಿ ಸೆಮಿಪೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಆತ್ಮವಿಶ್ವಾಸದ ಜೊತೆಗೆ ಅದೃಷ್ಟವೂ ಕೈಹಿಡಿದ ಕಾರಣ ʻಅಚ್ಚರಿʼ ಎಂಬಂತೆ ಪಾಕಿಸ್ತಾನ ಸೆಮಿಫೈನಲ್ ನಲ್ಲಿ ಕಾಣಿಸಿಕೊಂಡಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಸಿಡ್ನಿ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ. 

ಸೆಮಿಫೈನಲ್‌ನಲ್ಲಿ ಕಿವೀಸ್ ಎದುರು ಪಾಕ್ ಅಜೇಯ ಪಯಣ !

ಕ್ರಿಕೆಟ್ ಇತಿಹಾಸವನ್ನು ಕೆದಕಿದಾಗ ನ್ಯೂಜಿಲೆಂಡ್, ವಿಶ್ವಕಪ್ ಟೂರ್ನಿಗಳ ಸೆಮಿಫೈನಲ್ ಹೋರಾಟಗಳಲ್ಲಿ, ಇದುವರೆಗೂ  ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಐಸಿಸಿ ಏಕದಿನ ಮತ್ತು ಟಿ20 ವಿಶ್ವಕಪ್ ಟೂರ್ನಿಗಳ ಅಂತಿಮ ನಾಲ್ಕರ ಘಟ್ಟದಲ್ಲಿ ಉಭಯ ತಂಡಗಳು ಇದುವರೆಗೂ ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಕಿವೀಸ್ ಪಡೆ ಪಾಕಿಸ್ತಾನದ ಸವಾಲನ್ನು ಮೀರುವಲ್ಲಿ ವಿಫಲವಾಗಿದೆ.

1992 ಏಕದಿನ ವಿಶ್ವಕಪ್‌ನಲ್ಲಿ ಎರಡು ಬಾರಿ ಸೋಲು !

ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ 5ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ತಂಡ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳಲ್ಲಿ ಸೋಲು  ಖಂಡಿತ್ತು. ಗ್ರೂಪ್ ಹಂತದಲ್ಲಿ 7 ವಿಕೆಟ್ ಅಂತರದಲ್ಲಿ ಮುಗ್ಗರಿಸಿದ್ದ ಅತಿಥೇಯರು, ಸೆಮಿಫೈನಲ್ ನಲ್ಲಿ ನಾಲ್ಕು ವಿಕೆಟ್ ಗಳ ಅಂತರದಲ್ಲಿ ಪಾಕ್ ಗೆ ಶರಣಾಗಿದ್ದರು

ಆಕ್ಲೆಂಡ್ ನ ಈಡನ್ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಝಮಾಮ್-ಉಲ್-ಹಕ್  60 ರನ್ (37 ಎಸೆತ) ಮತ್ತು ಫೈನಲ್‌ನಲ್ಲಿ ಇಂಗ್ಲೆಂಡ್ನ ವಿರುದ್ಧ 35 ಎಸೆತಗಳಲ್ಲಿ 42 ರನ್‌ಗಳಿಸುವ ಮೂಲಕ ಇಂಝಿ, ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು.  

ವಿಶ್ವಕಪ್ 1999: ಮ್ಯಾಂಚೆಸ್ಟರ್

1999ರಲ್ಲಿ ಪಾಕಿಸ್ತಾನ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಗೆ ಅರ್ಹತೆ ಪಡೆದಿತ್ತು.  ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮತ್ತು ಬ್ಯಾಟಿಂಗ್‌ನಲ್ಲಿ ಸಯೀದ್ ಅನ್ವರ್ (113 ರನ್)  ಸಾಹಸದಿಂದ ನ್ಯೂಜಿಲೆಂಡ್ ಸವಾಲನ್ನು ಮೀರಿ ಮುನ್ನಡೆದ ಪಾಕಿಸ್ತಾನ, ಎರಡನೇ  ಬಾರಿಗೆ ವಿಶ್ವಕಪ್ನ ಫೈನಲ್ ಹಂತಕ್ಕೆ ತೇರ್ಗಡೆಯಾಗಿತ್ತು.

ಟಿ20 ವಿಶ್ವಕಪ್ 2007:  ಚೊಚ್ಚಲ ಚುಟುಕು ಟೂರ್ನಿಯಲ್ಲೂ ಸೋಲು

ಎರಡು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿನ ಸೆಮಿಫೈನಲ್ ನಲ್ಲಿ ಸೋಲು ಕಂಡ ಬಳಿಕ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ನ ಉದ್ಘಾಟನಾ ಟೂರ್ನಿಯ ಸೆಮಿಫೈನಲ್ ನಲ್ಲೂ ನ್ಯೂಜಿಲೆಂಡ್, ಪಾಕಿಸ್ತಾನಕ್ಕೆ ಶರಣಾಗಿತ್ತು. ಕೇಪ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 8 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತ್ತು. ಆದರೆ ಇಮ್ರಾನ್ ನಝೀರ್ (59 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತ್ತು. ಅದಾಗಿಯೂ ಪ್ರಶಸ್ತಿ ಫೈಟ್‌ನಲ್ಲಿ ಭಾರತದ ವಿರುದ್ಧ 5 ರನ್ಗಳ ರೋಚಕ ಸೋಲು ಕಂಡಿತ್ತು.

Join Whatsapp
Exit mobile version