Home ಕ್ರೀಡೆ ಟಿ20 ವಿಶ್ವಕಪ್ | ಭಾರತ – ಬಾಂಗ್ಲಾದೇಶ ನಡುವೆ ಮಹತ್ವದ ಹಣಾಹಣಿ

ಟಿ20 ವಿಶ್ವಕಪ್ | ಭಾರತ – ಬಾಂಗ್ಲಾದೇಶ ನಡುವೆ ಮಹತ್ವದ ಹಣಾಹಣಿ

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2ರ ಮಹತ್ವದ ಪಂದ್ಯದಲ್ಲಿ ಭಾರತ ಬುಧವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಸೆಮಿಫೈನಲ್ ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಉಭಯ ತಂಡಗಳು ಇದುವರೆಗೂ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 10 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಟಿ20 ವಿಶ್ವಕಪ್ನಲ್ಲಿ ನಡೆದಿರುವ ಮೂರು ಪಂದ್ಯಗಳಲ್ಲೂ ಬಾಂಗ್ಲಾದೇಶ ಭಾರತಕ್ಕೆ ಶರಣಾಗಿದೆ.

ಗ್ರೂಪ್ 2ರಲ್ಲಿ ತಲಾ ಮೂರು ಪಂದ್ಯಗಳನ್ನು ಆಡಿರುವ ಭಾರತ-ಬಾಂಗ್ಲಾ ತಂಡಗಳು 4 ಅಂಕಗಳನ್ನು ಹೊಂದಿವೆ. ಇಂದಿನ ಪಂದ್ಯವನ್ನು ಗೆಲ್ಲುವ ತಂಡ 6 ಅಂಕಗಳೊಂದಿಗೆ ಸೆಮಿಪೈನಲ್ಗೆ ಹತ್ತಿರವಾಗಲಿದೆ. ಅಜೇಯರಾಗಿರುವ ಆಫ್ರಿಕ, ಅಂಕಪಟ್ಟಿಯಲ್ಲಿ ಐದು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಅಡಿಲೇಡ್ ಓವಲ್ನಲ್ಲಿ ಪಂದ್ಯ ನಿಗದಿಯಾಗಿದೆ. ಆದರೆ ಮಂಗಳವಾರ ನಗರದಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ಟೀಮ್ ಇಂಡಿಯಾ ಒಳಾಂಗಣ ಮೈದಾನದಲ್ಲಿ ಅಭ್ಯಾಸ ನಡೆಸಿತ್ತು. ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾದರೆ ಎರಡೂ ತಂಡಗಳಿಗೂ ತಲಾ ಒಂದು ಅಂಕಗಳು ಲಭಿಸಲಿದ್ದು, ಸೂಪರ್ 12 ಹಂತದ ಅಂತಿಮ ಪಂದ್ಯ ನಿರ್ಣಾಯಕವಾಗಲಿದೆ. ನವೆಂಬರ್ 6ರಂದು ಮೆಲ್ಬೋರ್ನ್ನಲ್ಲಿ ಭಾರತ, ಝಿಂಬಾಬ್ವೆ ವಿರುದ್ಧ ಮತ್ತು ಬಾಂಗ್ಲಾದೇಶ-ಪಾಕಿಸ್ತಾನ ತಂಡಗಳ ನಡುವೆ ಸೂಪರ್ 12ರ ತನ್ನ ಅಂತಿಮ ಹಣಾಹಣಿ ನಡೆಯಲಿದೆ.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರಿಷಬ್ ಪಂತ್/ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮುಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ಬಾಂಗ್ಲಾದೇಶ : ನಜ್ಮುಲ್ ಹುಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹುಸೈನ್, ಮೊಸದ್ದೆಕ್ ಹುಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಯಾಸಿರ್ ಅಲಿ, ಮುಸ್ತಫಿಝುರ್ ರಹ್ಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್

Join Whatsapp
Exit mobile version