ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌, ಐರ್ಲೆಂಡ್‌ ತಂಡ ಪ್ರಕಟ:  7ನೇ ವಿಶ್ವಕಪ್‌ ಆಡಲಿರುವ ಮಾರ್ಟಿನ್ ಗಪ್ಟಿಲ್ !

Prasthutha|

ಕ್ಯಾನ್ ಬೆರಾ: ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್‌ ಮತ್ತು ಐರ್ಲೆಂಡ್‌ ತಲಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕೇನ್​ ವಿಲಿಯಮ್ಸನ್ ನ್ಯೂಜಿಲೆಂಡ್‌ ತಂಡವನ್ನು ಮತ್ತು ಐರ್ಲೆಂಡ್‌ ತಂಡವನ್ನು ಆಂಡ್ರ್ಯೂ ಬಲ್ಬಿರ್ನಿ ಮುನ್ನಡೆಸಲಿದ್ದಾರೆ.

- Advertisement -

ನ್ಯೂಜಿಲ್ಯಾಂಡ್‌ನ 15ರ ಬಳಗದಲ್ಲಿ ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್ ಸ್ಥಾನ ಪಡೆದಿದ್ದಾರೆ. ಆ ಮೂಲಕ ದಾಖಲೆಯ 7ನೇ ವಿಶ್ವಕಪ್‌ನಲ್ಲೂ 35 ವರ್ಷದ ಆಟಗಾರ, ಕಿವೀಸ್‌ ಪರ ಪ್ಯಾಡ್‌ ಧರಿಸಲಿದ್ದಾರೆ. ನ್ಯೂಜಿಲೆಂಡ್‌ ತಂಡದ ಪರ 7ನೇ ವಿಶ್ವಕಪ್‌ ಆಡುತ್ತಿರುವ ಮೊತ್ತಮೊದಲ ಆಟಗಾರ ಎಂಬ ದಾಖಲೆ ಎಂಬ ದಾಖಲೆ ಗಪ್ಟಿಲ್‌ ಪಾಲಾಗಿದೆ.  ಆ ಮೂಲಕ ಇದುವರೆಗೂ 6 ವಿಶ್ವಕಪ್‌ ಆಡಿರುವ ನಾಥನ್​ ಮೆಕಲಮ್​ ಮತ್ತು ರಾಸ್ ಟೇಲರ್‌ರನ್ನು ಗಪ್ಟಿಲ್‌ ಹಿಂದಿಕ್ಕಿದ್ದಾರೆ.

ಟಿ20 ವಿಶ್ವಕಪ್​​ನಲ್ಲಿ ಅಕ್ಟೋಬರ್​ 22ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮೂಲಕ ನ್ಯೂಜಿಲ್ಯಾಂಡ್, ತನ್ನ ಅಭಿಯಾನ ಆರಂಭಿಸಲಿದೆ. 2021ರ ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಆಸ್ಟ್ರೇಲಿಯಾಗೆ  ಶರಣಾಗುವ ಮೂಲಕ ಚಾಂಪಿಯನ್‌ ಪಟ್ಟದಿಂದ ವಂಚಿತವಾಗಿತ್ತು.

- Advertisement -

ಗಾಯದ ಕಾರಣ ತಂಡದಿಂದ ಹೊರಗುಳಿದಿರುವ ಪ್ರಮುಖ ಬೌಲರ್‌ ಲೂಕಿ ಫರ್ಗ್ಯೂಸನ್‌ ಬದಲು, ಆ್ಯಡಂ ಮಿಲ್ನೆ ಸ್ಥಾನ ಪಡೆದಿದ್ದಾರೆ.  ಫಿನ್ ಅಲೆನ್ ಮತ್ತು ಮೈಕೆಲ್ ಬ್ರೇಸ್ವೆಲ್ ಹೊಸಮುಖಗಳಾಗಿದ್ದು, ಉಳಿದಂತೆ ಅನುಭವಿಗಳಿಗೆ ನ್ಯೂಜಿಲೆಂಡ್‌ ಮಣೆ ಹಾಕಿದೆ.

ಟಿ20 ವಿಶ್ವಕಪ್​ಗೆ ನ್ಯೂಜಿಲ್ಯಾಂಡ್ ತಂಡ: ಕೇನ್​ ವಿಲಿಯಮ್ಸನ್​(ನಾಯಕ​), ಫಿನ್​ ಅಲೆನ್​​, ಟ್ರೆಂಟ್​ ಬೌಲ್ಟ್​, ಮಿಚೆಲ್​​​ ಬ್ರಾಚ್ವೆಲ್​, ಮಾರ್ಕ್​ ಚಾಂಪನ್​, ಡ್ವೇನ್​ ಕಾನ್ವೆ, ಲೂಕಿ ಫರ್ಗ್ಯೂಸನ್​, ಮಾರ್ಟಿನ್‌ ಗಫ್ಟಿಲ್​, ಆ್ಯಡಂ ಮಿಲ್ನೆ, ಡ್ರಾಲ್​ ಮಿಚೆಲ್​, ಜಿಮ್ಮಿ ನೀಶಮ್​, ಗ್ಲೆನ್​​ ಫಿಲಿಪ್ಸ್​, ಮಿಚೆಲ್​ ಸ್ಯಾಂಟ್ನರ್, ಇಶ್ ಸೋಧಿ, ಟಿಮ್‌ ಸೌಥಿ

ಐರ್ಲೆಂಡ್‌

ಮುಂಬರುವ ಟಿ20 ವಿಶ್ವಕಪ್‌ ನಲ್ಲಿ ಐರ್ಲೆಂಡ್ ತಂಡವನ್ನು ಆಂಡ್ರ್ಯೂ ಬಲ್ಬಿರ್ನಿ ಮುನ್ನಡೆಸಲಿದ್ದು, ಆರಂಭಿಕ ಬ್ಯಾಟ್ಸ್‌ಮನ್ ಪಾಲ್ ಸ್ಟಿರ್ಲಿಂಗ್ ಉಪ ನಾಯಕನಾಕನ ಜವಾಬ್ಧಾರಿ ವಹಿಸಲಿದ್ದಾರೆ.  ಅನುಭವಿ ಸ್ಪಿನ್ನರ್ ಆಂಡಿ ಮೆಕ್‌ಬ್ರೈನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಬದಲಿಗೆ ಆಯ್ಕೆ ಸಮಿತಿ ಸಿಮಿ ಸಿಂಗ್‌ ಅವರಿಗೆ ಅವಕಾಶ ನೀಡಿದೆ.

ಟಿ20 ವಿಶ್ವಕಪ್‌ಗೆ ಐರ್ಲೆಂಡ್ ತಂಡ

ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಪಾಲ್ ಸ್ಟಿರ್ಲಿಂಗ್ (ಉಪನಾಯಕ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಸಿಮಿ ಸಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯುವ.

Join Whatsapp