Home ಟಾಪ್ ಸುದ್ದಿಗಳು ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆ: ಶಾಸಕ ಟಿ.ರಾಜಾ ಸಿಂಗ್ ಅಮಾನತು

ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆ: ಶಾಸಕ ಟಿ.ರಾಜಾ ಸಿಂಗ್ ಅಮಾನತು

ನವದೆಹಲಿ: ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯು ತೆಲಂಗಾಣ ನಾಯಕ ಟಿ ರಾಜಾ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ಅವರ ಹೇಳಿಕೆಗಳು ಪಕ್ಷದ ನಿಲುವಿಗೆ ವಿರುದ್ಧವಾಗಿವೆ ಎಂದು ಪಕ್ಷ ಹೇಳಿದೆ.

ಹೆಚ್ಚಿನ ವಿಚಾರಣೆ ಬಾಕಿಯಿರುವವರೆಗೆ ನಿಮ್ಮನ್ನು ಪಕ್ಷದಿಂದ ಮತ್ತು ನಿಮ್ಮ ಜವಾಬ್ದಾರಿಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲು ನನಗೆ ನಿರ್ದೇಶಿಸಲಾಗಿದೆ ಎಂದು ಶಿಸ್ತು ಸಮಿತಿಯ ಮುಖ್ಯಸ್ಥ ಓಂ ಪಾಠಕ್ ಅವರು ಬರೆದಿರುವ ಅಮಾನತು ಪತ್ರದಲ್ಲಿ ತಿಳಿಸಲಾಗಿದೆ.

ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಹೈದರಾಬಾದ್ ನಲ್ಲಿ ಕಳೆದ ರಾತ್ರಿ ಪ್ರತಿಭಟನೆ ನಡೆದ ನಂತರ ಮಂಗಳವಾರ ಬಂಧಿಸಲಾಗಿತ್ತು.

Join Whatsapp
Exit mobile version